• first
  second
  third
  Slide
  previous arrow
  next arrow
 • ರೈತರು ಇ- ಕೆವೈಸಿ ಮಾಡುವುದು ಕಡ್ಡಾಯ

  300x250 AD

  ಮುಂಡಗೋಡ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಕೇಂದ್ರ ಸರಕಾರ ಈ ಯೋಜನೆಯಡಿ ಮುಂದಿನ ಚತುರ್ಮಾಸಿಕದಲ್ಲಿ(2022ರ ಏಪ್ರಿಲ್‍ನಿಂದ 2022ರ ಜು.) ನೀಡುವ ಆರ್ಥಿಕ ನೆರವು ಪಡೆಯಲು ಈ ಯೋಜನೆಯ ಪ್ರತಿ ಫಲಾನುಭವಿ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

  ಪ್ರತಿ ಫಲಾನುಭವಿ ರೈತರು 2022ರ ಮಾ. 31 ರೊಳಗೆ ಇ-ಕೆವೈಸಿ ಮಾಡಿಸಬೇಕು. ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ಅರ್ಹವಿರುವ ತಾಲೂಕಿನ ಪ್ರತಿಯೊಬ್ಬ ರೈತರು ನಿಮ್ಮ ಹತ್ತಿರದ ಸಿಎಸ್‍ಸಿ ಕೇಂದ್ರಗಳಲ್ಲಿ ಅಥವಾ ವೆಬ್‍ಪೇಜ್ ಮುಖಾಂತರ ಇ-ಕೆವೈಸಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು/ಬ್ಯಾಂಕ್/ಇ-ಕೆವೈಸಿ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

  300x250 AD
  Share This
  300x250 AD
  300x250 AD
  300x250 AD
  Back to top