ದಾಂಡೇಲಿ : ನಗರದಲ್ಲಿ ಮಾಸ್ಕ್ ಮರೆತು ಅಡ್ಡಾಡುತ್ತಿರುವವರಿಗೆ ದಂಡದ ರುಚಿ ತೋರಿಸಿ ಎಚ್ಚರಿಕೆ ನೀಡುವ ಕೆಲಸವನ್ನು ನಗರದ ಪೊಲೀಸರು ಶನಿವಾರ ಪುನಾರಂಭಿಸಿದರು.
ನಗರದ ಲಿಂಕ್ ರಸ್ತೆ, ಬರ್ಚಿ ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವವರನ್ನು ಹಿಡಿದು ದಂಡ ಆಕರಿಸಿ ಮಾಸ್ಕ್ ಧರಿಸುವಿಕೆಯ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದರು.
ಎಎಸೈಗಳಾದ ನಾರಾಯಣ ರಾಥೋಡ ಮತ್ತು ಬಸವರಾಜ ಒಕ್ಕುಂದರವರ ನೇತೃತ್ವದಲ್ಲಿ ಪೊಲೀಸರ ತಂಡ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಕ್ಕೆ ಆರಂಭಿದ್ದರು.