• first
  second
  third
  Slide
  previous arrow
  next arrow
 • ಅಯ್ಯಪ್ಪ ವೃತಾಚರಣೆ ನಿಮಿತ್ತ ಅನ್ನ ಸಂತರ್ಪಣೆ

  300x250 AD

  ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ತೂಗುಸೇತುವೆಯ ಸಮೀಪದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 19ನೇ ವರ್ಷದ ವೃತಾಚರಣೆಯ ಪ್ರಯುಕ್ತ ಅನ್ನಸಂತರ್ಪಣೆ ನೆರವೇರಿತು.

  ಸನ್ನಿಧಾನದ ಜಟ್ಟಿ ಗುರು ಸ್ವಾಮಿಯವರ ಮುಂದಾಳತ್ವದಲ್ಲಿ ಇನ್ನುಳಿದ ಮಾಲಾಧಾರಿ ಸ್ವಾಮಿಗಳು ಸೇರಿ, ಅಯ್ಯಪ್ಪ ಸ್ವಾಮಿಯ ಇಂದಿನ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು.

  300x250 AD

  ಬೆಳಗ್ಗೆ ಮಾಲಾಧಾರಿ ಸ್ವಾಮಿಗಳಿಂದ ತೀರ್ಥ ಕೊಡ ತರುವುದು, ಸತ್ಯನಾರಾಯಣ ಕಥೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನದಾನ ನೆರವೇರಿಸಲಾಯಿತು. ಸಂಜೆ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯ ನಡೆಯಿತು. ಶನಿವಾರ ಶಬರಿಮಲೆಯ ಯಾತ್ರೆಗೆ ಹೊರಡಲಿದ್ದಾರೆ.
  ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಏರ್ಪಡಿಸಿದ್ದ 27 ನೇ ವರ್ಷದ ವೃತಾಚರಣೆಯ ಪ್ರಯುಕ್ತ ದೀಪೋತ್ಸವ, ಸತ್ಯನಾರಾಯಣ ಕಥೆ, ಅನ್ನದಾನ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ಸಂಪನ್ನವಾಯಿತು.
  ಅನಿಲಗೋಡದ ಗೋವಿಂದ ಗುರುಸ್ವಾಮಿ, ನಾರಾಯಣ ಗುರುಸ್ವಾಮಿಯವರ ಮುಂದಾಳತ್ವದಲ್ಲಿ ಕಾರ್ಯಕ್ರಮಗಳು ನೆರವೇರಿದವು.
  ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸಿ ದೇವರಿಗೆ ಸೇವೆ ಸಲ್ಲಿಸಿ, ದರ್ಶನ ಪಡೆದು ಪುನಿತರಾದರು.

  Share This
  300x250 AD
  300x250 AD
  300x250 AD
  Back to top