• first
  second
  third
  Slide
  previous arrow
  next arrow
 • ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ

  300x250 AD

  ಹೊನ್ನಾವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಪಟ್ಟಣ ಯೋಜನಾ ಕಛೇರಿಯಲ್ಲಿ ಶುಕ್ರವಾರ ನಡೆಯಿತು.

  ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶಿವರಾಜ್ ಮೆಸ್ತ ಮಾತನಾಡಿ ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಜಾತಿ ಧರ್ಮ ಎಂದು ನೋಡದೆ ಪೂಜ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅರ್ಹರಿಗೆ ಸಹಾಯಾಸ್ತ ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ತಾಲೂಕಿನ ಕಾಸರಕೋಡ್ ಭಾಗದಲ್ಲಿ ರಾಣಿ ಚೆನ್ನಬೈರಾದೇವಿ ಮೂರ್ತಿ ಸ್ಥಾಪನೆಯ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು. ಸುಜ್ಞಾನ ನಿಧಿಯಿಂದ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ,ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

  300x250 AD

  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ್ ಶೆಟ್ಟಿ ಮಾತನಾಡಿ ಗ್ರಾಮಗಳು ಅಭಿವೃದ್ಧಿ ಹೊಂದಬೇಕೆನ್ನುವ ದೃಷ್ಟಿಯಲ್ಲಿ ಪೂಜ್ಯರು ಹಲವು ಹಳ್ಳಿ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳ ಕೊಠಡಿ, ವಿದ್ಯುದ್ದೀಕರಣ, ಶೌಚಾಲಯ, ಆವರಣ ಇತ್ಯಾದಿ ಶಿಕ್ಷಣಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯ ಅಗತ್ಯತೆಗಳಿಗೆ ನೆರವು ನೀಡಿದ್ದಾರೆ. ಇಲ್ಲಿಯತನಕ 39537 ವಿದ್ಯಾರ್ಥಿಗಳಿಗೆ 54 ಕೋಟಿ 73 ಲಕ್ಷ ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಲಾಗಿದೆ. ಜಿಲ್ಲೆಯ 3454 ವಿದ್ಯಾರ್ಥಿಗಳಿಗೆ ಮೂರುವರೆ ಕೋಟಿ ಶಿಷ್ಯವೇತನ ವಿತರಣೆಯಾಗಿದೆ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ 617 ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯುತ್ತಿದ್ದು ಹೊನ್ನಾವರ ಭಟ್ಕಳ ವಿಭಾಗದಲ್ಲಿ 212 ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ.

  Share This
  300x250 AD
  300x250 AD
  300x250 AD
  Back to top