ಕುಮಟಾ : ತಾಲ್ಲೂಕಿನ ಮಿರ್ಜಾನ್ ಹತ್ತಿರದ ಕೊಡಕಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹೆದ್ದಾರಿ ಇಲಾಖೆಯ ಜಾಗವನ್ನು ಆತಿಕ್ರಮಿಸಿ ಹೋಟೆಲ್ ನಿರ್ಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಕೊಡಕಣಿ ಮೂಲದ ವ್ಯಕ್ತಿಯೋರ್ವ ಕೋಡಕಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೆಲೆ ಬಾಳುವ ಜಾಗವನ್ನು ಆತಿಕ್ರಮಿಸಿ ಅಂಗಡಿ , ಮುಂಗಟ್ಟು ನಿರ್ಮಿಸಿಕೊಂಡಿದ್ದ. ಈ ಕುರಿತು ಸಾರ್ವಜನಿಕರು ಹಲವಾರು ಬಾರಿ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ವಿಪರ್ಯಾಸ ವೆಂದರೆ ಮಿರ್ಜಾನ್ ಗ್ರಾಮ ಪಂಚಾಯತ್ ಸಹ ಈತನಿಗೆ ನಿರಾಫೇಕ್ಸಣ(N O C) ಪತ್ರ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷ ವೆಂದರೆ ಈ ವ್ಯಕ್ತಿ ಆಫರಾಧಿ ಹಿನ್ನೆಯುಳ್ಳವನಾಗಿದ್ದು ಕೋಕಾ ಕಳುವು, ಲಾರಿಗಳ ಡೀಸೆಲ್ ಕಳುಹು ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಅತಿಥಿಯಾಗಿದ್ದ ಎನ್ನಲಾಗುತ್ತಿದೆ.
ಈತ ತಾನೊಬ್ಬ ಸಭ್ಯ ವ್ಯಕ್ತಿಯಂತೆ ಪೋಸ್ ಕೊಟ್ಟು ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್ ಮೆಲ್ ಮಾಡಿ ಅಧಿಕಾರಿಗಳು, ಗುತ್ತಿಗೆದಾರರು ಮರಳು, ಚಿರೇಕಲ್ಲು ತೆಗೆಯುವವರು ಹಾಗೂ ಸಣ್ಣ ಪುಟ್ಟ ವ್ಯಾಪಾರರಸ್ಥರು ಸೇರಿದಂತೆ ಎಲ್ಲರನ್ನು ಬ್ಲಾಕ್ ಮೆಲ್ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದ ಎನ್ನಲಾಗುತ್ತಿದೆ.