
ಗೋಕರ್ಣ: ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ ಜುಲೈ 8 ಗುರುವಾರ ಪಟ್ಟಣದ ಮಾರುಕಟ್ಟೆ ಪಕ್ಕದಲ್ಲಿರುವ ಆಡುಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 18 ರಿಂದ 44 ವಯೋಮಾನದೊಳಗಿನ ವ್ಯಕ್ತಿಗಳಿಗೆ ಉಚಿತ ಕೊರೊನಾ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕೆನರಾ ಹೆಲ್ತ್ ಕೇರ್ ಸೆಂಟರ್ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನವನ್ನ ಗುರುವಾರ ಬೆಳಿಗ್ಗೆ 11 ಗಂಟೆಗೆ ಶಾಸಕ ದಿನಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆನರಾ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ ಅವರ ವಿಶೇಷ ಉಪಸ್ಥಿತಿ ಇರಲಿದೆ. ಗೋಕರ್ಣ ಪಟ್ಟಣವೊಂದರಲ್ಲೇ ಒಂದು ಸಾವಿರ ಲಸಿಕೆಯನ್ನ ನೀಡುವ ಗುರಿಯನ್ನ ಡಾ.ಅಶ್ವಥ್ ನಾರಾಯಣ್ ಫೌಂಡೇಷನ್ ಹೊಂದಿದ್ದು, ಸಾರ್ವಜನಿಕರು ಅಭಿಯಾನದ ಉಪಯೋಗ ಪಡೆಯುವಂತೆ ಮನವಿ ಮಾಡಿದೆ. ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ನೇರವಾಗಿ ಶಾಲಾ ಕೇಂದ್ರಕ್ಕೆ ಆಗಮಿಸಬಹುದಾಗಿದ್ದು, ಆಧಾರ್ ಕಾರ್ಡ್ ಕಡ್ಡಾಯ ಎಂದು ತಿಳಿಸಿದ್ದಾರೆ.