ಶಿರಸಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಓಮಿಕ್ರಾನ್ ಕಾರಣದಿಂದ ರಾಜ್ಯಾದ್ಯಂತ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಶನಿವಾರ ಶಿರಸಿಯಲ್ಲಿಯೂ ಸಹ ಉತ್ತಮ ಬೆಂಬಲ ಜನರಿಂದ ದೊರೆತಿದೆ. ವಾರದ ಇತರ ದಿನದಲ್ಲಿ ಸದಾ ಜನರಿಂದ ತುಂಬಿರುತಿದ್ದ ಪ್ರದೇಶಗಳು ಇಂದು ಕೆಲವೇ ಕೆಲವು ವಾಹನಗಳ ಓಡಾಟಕ್ಕೆ ಸೀಮಿತವಾಗಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ಪೋಲೀಸರು ಬ್ಯಾರಿಕೇಡ್ ಅಳವಡಿಸಿ, ಅನಾವಶ್ಯಕ ಓಡಾಡುವವರ ಮೇಲೆ ನಿಗಾ ಇಡುತ್ತಿದ್ದು, ಜನರೂ ಸಹ ವಿಕೆಂಡ್ ಕರ್ಫ್ಯೂ ಗೆ ಉತ್ತಮ ಬೆಂಬಲ ನೀಡಿರುವಂತೆ ಕಂಡುಬಂದಿದೆ.