• first
  second
  third
  Slide
  previous arrow
  next arrow
 • ಫೆ.15-16 ರಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸಭೆ; ಪತ್ರಿಕಾಗೋಷ್ಠಿಯಲ್ಲಿಎಂ.ಗುರುಮೂರ್ತಿ ಹೇಳಿಕೆ

  300x250 AD

  ಕಾರವಾರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸರ್ವ ಸದಸ್ಯರ ಬೃಹತ್ ಸಭೆಯು ಫೆಬ್ರುವರಿ 15 ಮತ್ತು 16ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಐಕ್ಯತಾ ಭಾವದಿಂದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.

  ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆÇ್ರ.ಬಿ.ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು 1970ರಲ್ಲಿ ಆರಂಭ ಮಾಡಿ ಶಿವಮೊಗ್ಗ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿಸಿದ್ದರು. 1975ರವರೆಗೆ ಪೆÇ್ರೀ.ಬಿ.ಕೃಷ್ಣಪ್ಪನವರ ಜೀವಿತಾವಧಿಯ ತನಕ ಮತ್ತು ಅವರ ನಾಯಕತ್ವದಲ್ಲಿ ಸಮಿತಿಯು ಆಳುವ ಸರಕಾರಗಳ ಎದೆಗಳನ್ನು ನಡಗಿಸುವಂತಹ ಯಶಸ್ವಿ ಹೋರಾಟಗಳನ್ನು ಮಾಡುತ್ತ ಬಂದಿತ್ತು ಎಂದರು.

  ಅವರ ನಿಧನದ ನಂತರ ಸಮಿತಿಯು ವಿಭಜನೆಗೊಂಡು ಅನೇಕ ಕಡೆ ಮುಖ ಮಾಡಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಕೆಲವು ನಾಯಕರು ಸಮಿತಿಯಿಂದ ಹೊರ ಹೋಗಿ ಸಮಿತಿಯ ಹೆಸರು ನೋಂದಣಿ ಸಂಖ್ಯೆಯನ್ನು ಬಳುಸುತ್ತಿದ್ದರು. 1974ರಿಂದ 2009 ರವರೆಗೂ ಎಲ್ಲಾ ದಾಖಲೆಗಳೊಂದಿಗೆ ಸಂಘಟನೆ ಕಾಲ ಕಾಲಕ್ಕೆ ಸಮಿತಿಯನ್ನು ನವೀಕರಣ ಮಾಡಿಸಿಕೊಂಡು ಬಂದಿತ್ತು. ವಸ್ತುಸ್ಥಿತಿ ಹೀಗಿದ್ದರೂ ಸಹ ಅನೇಕರು ಸಮಿತಿ ಹೆಸರಿನಲ್ಲಿಯೇ ಚಟುವಟಿಕೆ ನಡೆಸುತ್ತಿದ್ದರು ಎಂದು ಅವರು ಆರೋಪಿಸಿದರು.

  ಈ ಸಂಬಂಧ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ವೆಂಕಟಗಿರಿಯಯ್ಯ ಮತ್ತು ಇತರರ ವಿರುದ್ಧ 2012ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಮಾರು 9 ವರ್ಷ 2 ತಿಂಗಳು 18 ದಿನಗಳ ಕಾಲ ನ್ಯಾಯಾಲಯದಲ್ಲಿ ಸುಧೀರ್ಘವಾದ ವಾದ-ವಿವಾದ ನಡೆದು 2021ರ ಮಾರ್ಚ್‍ನಲ್ಲಿ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿತ್ತು ಎಂದು ತಿಳಿಸಿದರು.

  300x250 AD

  ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಮಾತನಾಡಿ, ನ್ಯಾಯಾಲಯದ ತೀರ್ಪಿನ ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ಹೊರ ಹೋಗಿದ್ದ ನಾಯಕರುಗಳು ಮೂಲ ಸಮಿತಿಯ ವಾರಸುದಾರರಾದ ಗುರುಮೂರ್ತಿಯವರ ಜೊತೆ ಮಾತನಾಡಿ ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ 2021ರ ನವೆಂಬರ್‍ನಲ್ಲಿ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಒಂದಾಗಿದ್ದೆವು. ಅದೇ ಪ್ರಕಾರ ಫೆಬ್ರುವರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯಲ್ಲೂ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

  ರಾಜ್ಯ ಸಂಚಾಲಕ ಎಸ್.ಫಕೀರಪ್ಪ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಶಾಂತಾರಾಮ ಹುಲಸ್ವಾರ, ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಡಿ.ಮುಡೆಣ್ಣವರ ಸೇರಿದಂತೆ ಹಲವರಿದ್ದರು.

  Share This
  300x250 AD
  300x250 AD
  300x250 AD
  Back to top