ಕಾರವಾರ: ಇಲ್ಲಿನ ಎಜ್ಯುಕೇಷನ್ ಸೊಸೈಟಿಯ ‘ಬಾಲಮಂದಿರ ಪ್ರೌಢಶಾಲೆ’ ಯಲ್ಲಿ ನಡೆದ15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ನೀಡುವ ಕುರಿತು ಪಾಲಕರಿಗೆ ನೀಡಲಾದ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಬಾಲಮಂದಿರ ಪ್ರೌಢಶಾಲೆ ಇವುಗಳ ಸಂಯುಕ್ತಆಶ್ರಯದಲ್ಲಿ ನಡೆದ ಪಾಲಕರ ಸಭೆಯಲ್ಲಿ, ಮುಖ್ಯಾಧ್ಯಾಪಕರಾದ ಶ್ರೀಮತಿ ಅಂಜಲಿ ಎಸ್. ಮಾನೆಯವರು ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ನೀಡವುದರ ಮಹತ್ವ, ಪಾಲಿಸಬೇಕಾದ ನಿಯಮಗಳು, ವ್ಯವಸ್ಥೆ, ದಾಖಲೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿಆರೋಗ್ಯಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ರಾಜೇಶ್ವರಿ ನಾಯ್ಕ ಮತ್ತುಶ್ರೀ ಪ್ರವೀಣ್ ಡಯಸ್ರವರು ಉಪಸ್ಥಿತರಿದ್ದು, ಪಾಲಕರ ಪ್ರಶ್ನೆಗಳಿಗೆ ಉತ್ತರಿಸಿದರು.ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ನಜೀರುದ್ದೀನ್ ಸೈಯದ್ರವರು ಸಭಿಕರನ್ನು ಸ್ವಾಗತಿಸಿದರು. ಸುಮಾರು ನೂರಕ್ಕೂ ಹೆಚ್ಚಿನ ಪಾಲಕರು ಉಪಸ್ಥಿತರಿದ್ದು, ತರಬೇತಿಯ ಪ್ರಯೋಜನ ಪಡೆದರು.
15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ನೀಡುವ ಕುರಿತು ಪಾಲಕರಿಗೆ ತರಬೇತಿ
