• Slide
    Slide
    Slide
    previous arrow
    next arrow
  • ಜನಪರ ಯೋಜನೆ ಹೋರಾಟಕ್ಕೆ ಕಾಂಗ್ರೆಸ್ ಎಂದಿಗೂ ಬದ್ಧ; ಡಿ.ಕೆ ಶಿವಕುಮಾರ್

    300x250 AD

    ಶಿರಸಿ: ಸರ್ಕಾರ ಯಾವುದೇ ಹೊಸ ಯೋಜನೆ ಜಾರಿ ಮಾಡಿದರೂ, ಕಾಂಗ್ರೆಸ್ ಜನಪರ ಯೋಜನೆಯ ಬಗ್ಗೆ ಹೋರಾಟ ನಡೆಸುತ್ತದೆ. ರಾಜ್ಯದಲ್ಲಿ ಮೀನುಗಾರರಿಗೆ ಭಾರೀ ಸಮಸ್ಯೆಯಾಗಿದೆ, ಈ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
    ಬುಧವಾರ ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ-ಸೈಕಲ್ ಜಾಥಾದಲ್ಲಿ ಭಾಗವಹಿಸಲು ಶಿರಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಮೀನುಗಾರನೊಬ್ಬ 10 ಜನರಿಗೆ ಉದ್ಯೋಗ ಸೃಷ್ಟಿಸುತ್ತಾನೆ. ಆದ್ದರಿಂದ ಕರಾವಳಿ ಭಾಗದಲ್ಲಿ ಓಡಾಡಿ ಮೀನುಗಾರರ ಸಮಸ್ಯೆ ಆಲಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಹೊನ್ನಾವರದ ಕಾಸರಕೋಡ್‍ನಲ್ಲಿ ಬಂದರು ವಿಸ್ತರಣೆ ಯೋಜನೆ ನಡೆದಿದೆ. ಇದನ್ನು ಬೇರೆಲ್ಲಾದರೂ ಮಾಡಲಿ. ಆದರೆ, ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್‍ನಲ್ಲಿ ಯಾವುದೇ ಬಣವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top