ಕಾರವಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸುದೀರ್ಘ ಜೀವನಕ್ಕಾಗಿ ನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಾಮೃತ್ಯಂಜಯ ಜಪ ಹಾಗೂ ವಿಶೇಷಪೂಜೆಯನ್ನು ನಗರದ ಮಹಾದೇವಸ್ಥಾನದಲ್ಲಿ ಸಲ್ಲಿಸಿಸಲಾಯಿತು.
ಪಂಜಾಬ್ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆಸಿದ ಭದ್ರತಾ ಲೋಪದೋಷದ ಕಾರಣ ಪ್ರಾಣಾಪಾಯದ ಅನಾಹುತದಿಂದ ಮೋದಿಜಿ ಪಾರಾಗಿದ್ದಾರೆ. ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಹಾಗೂ ಸುದೀರ್ಘಜೀವನಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ನಯನಾ ನೀಲಾವರ, ಜಿಲ್ಲಾ ಕಾರ್ಯದರ್ಶಿ ಮಾಲಾ ಹುಲಸ್ವಾರ್, ನಗರಸಭೆ ಸ್ಥಾಯಿ ಸಮಿತಿಅಧ್ಯಕ್ಷೆಸಂಧ್ಯಾ ಬಾಡ್ಕರ್, ಮಹಿಳಾ ಮೋರ್ಚಾಅಧ್ಯಕ್ಷೆ ವೃಂದಾಧಂಸಂಡೇಕರ್, ಉಪಾಧ್ಯಕ್ಷೆ ವೈಶಾಲಿ ತಾಂಡೇಲ್, ನಗರಸಭೆ ಸದಸ್ಯರಾದರೋಷ್ಟಿ ಮಲ್ಲೇಕರ್, ಸ್ನೇಹ ಮಂಜೇಕರ್, ಮೀನಾಕ್ಷಿಕಲ್ಲುತ್ಕರ್, ನಗರಸಭೆಉಪಾಧ್ಯಕ್ಷ ಪ್ರಕಾಶ್ ನೈಕ್, ವಿಶೇಷ ಆಹ್ವಾನಿತ ಮನೋಜ್ ಭಟ್, ರಾಜು ನಾಯಕ ಸೇರಿದಂತೆ ಮಹಿಳಾ ಮೋರ್ಚಾ ಸದಸ್ಯರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.