• Slide
  Slide
  Slide
  previous arrow
  next arrow
 • ಮುರುಡೇಶ್ವರಕ್ಕೆ ಬಂದಿಳಿದ ನೂತನ ಬ್ರಹ್ಮರಥ

  300x250 AD


  ಭಟ್ಕಳ: ವಿಶ್ವ ವಿಖ್ಯಾತ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರ ದೇವಸ್ಥಾನದ ನೂತನ ಬ್ರಹ್ಮರಥ ಗುರುವಾರ ಸಂಜೆ ಕುಂದಾಪುರದಿಂದ ಲಾರಿಯಲ್ಲಿ ಮುರುಡೇಶ್ವರಕ್ಕೆ ತರಲಾಯಿತು.


  ಮುರುಡೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುಖ್ಯ ದ್ವಾರದ ಮೂಲಕ ರಥವನ್ನು ಸಾವಿರಾರು ಭಕ್ತರು ಪೂರ್ವಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ಮುರುಡೇಶ್ವರ ದೇವಸ್ಥಾನದ ಮಹಾದ್ವಾರದಲ್ಲಿ ದಿವಂಗತ ಆರ್.ಎನ್.ಶೆಟ್ಟಿಯವರ ಸುಪುತ್ರರಾದ ಸುನಿಲ್ ಆರ್. ಶೆಟ್ಟಿ ಹಾಗೂ ಅವರ ಆರ್.ಎನ್. ಶೆಟ್ಟಿಯವರ ಕುಟುಂಬಸ್ಥರು ರಥಕ್ಕೆ ಪೂಜೆ ಸಲ್ಲಿಸಿ ರಥವನ್ನು ಭರಮಾಡಿಕೊಳ್ಳಲಾಯಿತು. ವೇದಮೂರ್ತಿ ಲಕ್ಷ್ಮೀನಾರಯಣ ಅಡಿಗಳ್ ಇವರ ನೇತ್ರತ್ವದ ಪುರೋಹಿತರ ತಂಡ ವಿವಿಧ ದಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು.

  ಮುರುಡೇಶ್ವರದ ದೇವಸ್ತಾನದ ರಥ 400 ವರ್ಷಗಳ ಹಳೆಯದಾಗಿದ್ದು ಅದು ಶೀಥಿಲಾವಸ್ಥೆಗೆ ತಲುಪಿರುವ ರಥವನ್ನು ನೂತವಾದ ರಥ ನಿರ್ಮಾಣ ಮಾಡಬೇಕಿಂದ ಡಾ. ಆರ್ ಎನ್ ಶೆಟ್ಟಿಯವರ ಮಹದಾಶೆಯನ್ನು ಅವರ ಮಗನಾದ ಸುನೀಲ್ ಆರ್ ಶೆಟ್ಟಿ ಹಾಗೂ ಅವರ ಕುಟುಂಬ ತಂದೆಯ ಆಶೆಯನ್ನು ಸಾಕಾರಗೊಳಿಸಲು ಮಹತ್ತ ಕಾರ್ಯ ಕೈಗೊಂಡಿದ್ದರು. ಹೀಗಾಗಿ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯವು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಲಕ್ಷ್ಮೀನಾರಾಯಣ ಆಚಾರ್ಯರ ಮಾರ್ಗದರ್ಶನದಲ್ಲಿ ನಡೆದು ಶಿಲ್ಪಿ ರಾಜಗೋಪಾಲ ನೇತೃತ್ವದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿತ್ತು.

  ಬ್ರಹ್ಮರಥದ ವಿಶೇಷತೆ ಏನು?:

  300x250 AD

  ಸಾಗುವಾನಿ, ಬೋಗಿ, ಮರಗಳನ್ನು ರಥ ನಿರ್ಮಾಣದಲ್ಲಿ ಬಳಸಲಾಗಿದೆ. 15 ಅಡಿ ಎತ್ತರ, 6 ಚಕ್ರಗಳಿದ್ದು, 18 ಅಂತಸ್ಥು , ಹೀಗೆ ಬ್ರಹ್ಮರಥ 40 ಟನ್ ಭಾರ ಇರಲಿದೆ. ಶಿವ, ಸುಬ್ರಹ್ಮಣ್ಯ ಸ್ವಾಮಿಗಳ ಲೀಲಾವಳಿಗಳು, ಭೂ ಕೈಲಾಸ, ಪಾರ್ವತಿ ಕಲ್ಯಾಣ, ಶಿವನಿಗೆ ಸಂಬಂಧಿಸಿದಂತೆ ಗಮನ ಸೆಳೆಯುವ ಹಲವು ವರ್ಣಿಕೆಗಳನ್ನು ಕೆತ್ತನೆ ಮಾಡಲಾಗಿವೆ. ಆನೆಕಾಲು, ಸಿಂಹಗಳು, ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರು ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳು, ಬ್ರಹ್ಮರಥದಲ್ಲಿ ವಿಶಿಷ್ಟ ಗಮನ ಸೆಳೆಯುತ್ತಿದೆ.

  ರಥವನ್ನು ಭಕ್ತರು ಹಾಗೂ ವಿವಿಧ ಕಲಾತಂಡಗಳಿಂದ ಮೇರವಣಿಗೆಯ ಮೂಲಕ ಓಲಗ ಮಂಟಪದವರೆಗೆ ತರಲಾಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗವಹಿದ್ದರು. ಈ ಸಂದರ್ಭದಲ್ಲಿ ಮುರುಡೇಶ್ವರದ ನಿರ್ಮಾಣಕೃರ್ತ ದಿವಂಗತ ಆರ್.ಎನ್. ಶೆಟ್ಟಿಯವರ ಕುಟುಂಬಸ್ಥರು, ಮಾಜಿ ಶಾಸಕ ಮಂಕಾಳ ವೈದ್ಯ, ಮಾಜಿ ತಾಲೂಕು ಪಂಚಾಯತ ಸದಸ್ಯ ಈಶ್ವರ ನಾಯ್ಕ, ದೇವಸ್ಥಾನದ ಟ್ರಸ್ಟಿಗಳು , ಭಕ್ತಾದಿಗಳು ನೂತನ ರಥೋತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

  ಜನವರಿ 14 ಶುಕ್ರವಾರದಂದು ಬೆಳಿಗ್ಗೆ ರಥದ ಎದುರು ಗಣಹವನ, ರಥಾಂಗ ದೇವತಾ ಆವಾಹನೆ ಹವನ, ರಥ ಪೂಜೆ ನಂತರ ಮಂಗಲ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ಬ್ರಹ್ಮರಥ ಸಮರ್ಪಣೆ ಕಾರ್ಯ ನಡೆಯಲಿದೆ ಎಂದು ದೇವಸ್ತಾನ ಆಡಳಿತ ಮಂಡಳಿ ತಿಳಿಸಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top