ಹೊನ್ನಾವರ: ಅಧಿಕೃತ ಮರಳುಗಾರಿಕೆ ಸ್ಥಗಿತವಾದಾಗಿದ್ದನಿಂದ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದೆ. ಆದರು ಇಲಾಖೆಗಳು ಜಾಣಕುರುಡುತನ ಪ್ರದರ್ಶಿಸುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ಗಾರಿಕೆ ಶೀಘ್ರವಾಗಿ ಕಡಿವಾಣ ಹಾಕಿ ಅಧಿಕೃತ ಮರಳುಗಾರಿಕೆ ಅನುಮತಿ ನೀಡಬೇಕೆನ್ನುವುದು ಶರವಾತಿ ನದಿ ತಟದ ಅಧಿಕೃತ ಮರಳುಗಾರಿಕೆ ನಡೆಸುವವರ ಆಗ್ರಹವಾಗಿದೆ.
ಸರ್ಕಾರಕ್ಕೆರಾಜಧನ, ಜಿಎಸ್ ಟಿ ಎಲ್ಲವನ್ನು ನಾವು ಭರಿಸುತ್ತೇವೆ. ಆದರೆ ಇನ್ನೂ ಅಧಿಕೃತ ಮರಳುಗಾರಿಕೆಗೆ ಅನುಮತಿ ಸಿಗದಿರುವುದು ಅತ್ಯಂತ ವಿಷಾದನೀಯ ಸಂಗತಿಎಂದು ಭೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾವೆಲ್ಲ ಆರೇಳು ತಿಂಗಳಿಂದ ಮರಳುಗಾರಿಕೆಗೆ ಬಳಸುವ ವಾಹನವನ್ನು ಹಾಗೆಯೇ ನಿಲ್ಲಿಸಿದ್ದು, ನಮ್ಮ ನಂಬಿದ ಮರಳು ಕೂಲಿ ಕಾರ್ಮಿಕರುಉದ್ಯೋಗವಿಲ್ಲದೇಅಂತತ್ರ ಸ್ಥಿತಿಯಲ್ಲಿದ್ದಾರೆ. ಕೆಲವರು ಈ ಕೆಲಸವನ್ನು ಬಿಟ್ಟು ಬೇರೆಉದ್ಯೋಗಕ್ಕೆಅವಲಂಭಿತರಾಗುತ್ತಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರುಕಾರ್ಮಿಕ ಸಚಿವರಾಗಿದ್ದು, ಜಿಲ್ಲೆಯ ಮರಳು ಕಾರ್ಮಿಕರ ಅಳಲಿಗೆ ಶೀಘ್ರವಾಗಿ ಸ್ಪಂದಿಸಬೇಕೆನ್ನುವ ಆಗ್ರವನ್ನಿಟ್ಟಿದ್ದಾರೆ.
ಈ ಕುರಿತು ಬಹಿರಂಗವಾಗಿತಮ್ಮ ಅನಿಸಿಕೆ ಹೇಳಲಿಚ್ಚಿಸಿದರೆ ಅಕ್ರಮದಂದೆ ಕೊರರ ಕೆಂಗಣ್ಣಿಗೆ ಗುರಿಯಾಗಬೇಕೆನ್ನುವ ಒಡಲಾಳದ ಆತಂಕವನ್ನು ತೋಡಿಕೊಂಡಿದ್ದಾರೆ. ಇನ್ನೂ ಪಾಸ್ ಪರ್ಮಿಟ್ ಪಡೆದುಅಧಿಕೃತ ಮರಳುಗಾರಿಕೆ ನಡೆಸುತ್ತಿದ್ದ ಅನೇಕ ಮಾಲೀಕರು ಸಹ ದಿಕ್ಕತೋಚದಾಗಿಅಧಿಕೃತ ಮರಳುಗಾರಿಕೆಗೆ ಯಾವಾಗಅನುಮತಿ ಸಿಗುತ್ತದೆಯೋ ಎಂದುಚಾತಕ ಪಕ್ಷಿಯಂತೆಕಾಯುತ್ತಿದ್ದಾರೆ.
ಕಳೆದೆರಡು ದಿನಗಳ ಹಿಂದೆತಾಲೂಕಿನ ಮೂಡ್ಕಣಿಯಲ್ಲಿ ಲಾರಿಯೊಂದರಲ್ಲಿಅಕ್ರಮ ಮರಳು ಸಾಗಾಟ ಮಾಡುತ್ತಿದ್ದು ಅಧಿಕಾರಿಗಳ ದಾಳಿ ಹಿನ್ನಲೆ ತಪ್ಪಿಸಿಕೊಳ್ಳಲು ಯತ್ನಿಸಿ ಖಾಸಗಿ ಜಮೀನೊಂದರಲ್ಲಿಅಕ್ರಮ ಮರಳನ್ನು ಅನ್ಲೋಡ್ ಮಾಡಿದ್ದಾರೆಎನ್ನಲಾಗಿದೆ. ಅಧಿಕಾರಿಗಳು ಲಾರಿಯನ್ನು ವಶಪಡಿಸಿಕೊಂಡಿದ್ದು, ಪ್ರಭಾವಿಗಳ ಒತ್ತಡ ಹಿನ್ನಲೆ ಪ್ರಕರಣದಾಖಲಿಸಲು ಅಧಿಕಾರಿಗಳು ಮೀನ ಮೇಷಎಣಿಸುತ್ತಿದ್ದರುಎನ್ನುವ ಮಾಹಿತಿ ಲಭಿಸಿದೆ.
ದಾಖಲೆಯಿಲ್ಲದೆ ಸಂಗ್ರಹಿಸಿಟ್ಟ ಮರಳು ದಾಳಿ ವೇಳೆ ಪತ್ತೆಯಾದರುಕ್ರಮಕ್ಕೆ ವಿಳಂಬವೇಕೆ? ದಂದೆ ನಡೆಸುವವರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುವಉದ್ದೇಶವೆ? ಎಂದು ಹಲವರು ಪ್ರಶ್ನಿಸಿದ್ದಾರೆ.