• Slide
    Slide
    Slide
    previous arrow
    next arrow
  • ಇನಸ್ಟ್ರೂಮೆಂಟಲ್ ಮ್ಯೂಸಿಕ್; ರಾಜ್ಯ ಮಟ್ಟಕ್ಕೆ ಸುಜಲ್ ಬಾನಾವಳಿ ಆಯ್ಕೆ

    300x250 AD

    ಅಂಕೋಲಾ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಇತ್ತೀಚೆಗೆ ನಡೆದ ಕಲೋತ್ಸವ-2021 ಇನಸ್ಟ್ರೂಮೆಂಟಲ್ ಮ್ಯೂಸಿಕ್ ಕ್ಲಾಸಿಕಲ್ ವಿಭಾಗದಲ್ಲಿ ಅವರ್ಸಾ ಮೂಲದ ಸುಜಲ್ ರಾಜೇಶ ಸಿರ್ಸಿಕರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.


    ಸುಜಲ್ ಬಾನಾವಳಿ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಶಿರಸಿ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ 9 ನೇ ತರಗತಿಯಲ್ಲಿ ಓದುತ್ತಿದ್ದು ತಬಲಾ ವಿದ್ವಾಂಸ ಮಂಜುನಾಥ ಭಟ್ ನೆಬ್ಬೂರ ಬಳಿ ತಬಲಾ ವಾದನ ಕಲಿಯುತ್ತಿದ್ದಾನೆ.

    300x250 AD


    ವಿನಯಾ ಹಾಗೂ ರಾಜೇಶ ದಂಪತಿಗಳ ಪುತ್ರನಾಗಿರುವ ಈತನ ಅಜ್ಜಅವರ್ಸಾದ ಹರೀಶದತ್ತಾ ಬಾನಾವಳಿ ರಂಗಭೂಮಿಯ ಖ್ಯಾತ ತಬಲಾ ವಾದಕರಾಗಿದ್ದು ಮುತ್ತಜ್ಜದತ್ತಾ ಬಾನಾವಳಿ ಕೂಡತಬಲಾ ವಾದಕರಾಗಿದ್ದರು. ವಂಶ ಪಾರಂಪರಿಕವಾಗಿ ಬಂದತಬಲಾ ವಾದನಕಲೆಯನ್ನು ಮುಂದುವರೆಸಿಕೊಂಡು ಬಂದ ಸುಜಲ್ ಶಾಲೆಗೆ ಹಾಗೂ ಊರಿಗೆ ಕೀರ್ತಿತಂದಿದ್ದಾನೆ. ಈತನ ಸಾಧನೆಗೆ ಅಂಕೋಲಾ ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆ ಅಭಿನಂದಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top