• Slide
    Slide
    Slide
    previous arrow
    next arrow
  • ಕೇಂದ್ರ ಸಚಿವ ಸಂಪುಟ ಪುನರ್ ರಚನೆ; ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿಗೆ ಸ್ಥಾನ!

    300x250 AD

    ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್ರಚನೆ ಇಂದು ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿನಡೆಯಲಿದೆ. ಸಂಭಾವ್ಯ ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 43 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.
    ನಾರಾಯಣ್ ರಾಣೆ, ಸರ್ಬಾನಂದ ಸೋನೊವಾಲ್, ಜ್ಯೋತಿರಾದಿತ್ಯ ಸಿಂಧಿಯಾ, ಅಜಯ್ ಭಟ್, ಭೂಪೇಂದರ್ ಯಾದವ್, ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ, ಸುನೀತಾ ದುಗ್ಗಲ್, ಮೀನಾಕ್ಷಿ ಲೇಖಿ, ಭಾರತಿ ಪವಾರ್, ಶಂತನು ಠಾಕೂರ್ ಮತ್ತು ಕಪಿಲ್ ಪಾಟೀಲ್ ಮತ್ತು ಅಪ್ನಾ ದಳದ ಅನುಪ್ರಿಯಾ ಪಟೇಲ್. ಜೆಡಿಯುನ ಆರ್‍ಸಿಪಿ ಸಿಂಗ್, ಎಲ್‍ಜೆಪಿಯ ಪಶುಪತಿ ಪಾರಸ್ ಅವರು ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ.
    ರಾಜ್ಯ ಸಚಿವರಾದ ಜಿ ಕಿಶನ್ ರೆಡ್ಡಿ, ಪುರುಷೋತ್ತಮ್ ರೂಪಾಲ ಮತ್ತು ಅನುರಾಗ್ ಠಾಕೂರ್ ಮತ್ತಿತರರು ಪ್ರಧಾನಿಯನ್ನು ಭೇಟಿ ಮಾಡಿದ್ದು, ಅವರಿಗೂ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಡ್ತಿ ಪಡೆಯುವವರು ಸೇರಿದಂತೆ ಸುಮಾರು 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಯುವಕರು ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಆಡಳಿತಾತ್ಮಕ ಅನುಭವ ಹೊಂದಿರುವವರ ಮಿಶ್ರಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
    ಕೇಂದ್ರ ಸಚಿವರಾದ ಆರ್ ಕೆ ಸಿಂಗ್, ಮನ್ಸುಖ್ ಮಾಂಡವಿಯಾ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಸಹ ಬಡ್ತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಭಾವ್ಯ ಸಚಿವರು ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಉಪಸ್ಥಿತರಿದ್ದರು. 2019 ರ ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮಂತ್ರಿ ಮಂಡಲದಲ್ಲಿ ನಡೆಯುತ್ತಿರುವ ಮೊದಲ ಪುನರ್ ರಚನೆಯಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top