ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಜ.9 ರಿಂದ ಮುಂದಿನ ಆದೇಶದವರೆಗೆ ರವಿವಾರದ ಸಂತೆಯನ್ನು ರದ್ದುಪಡಿಸಿದ್ದು, ಸಂತೆ ವ್ಯಾಪಾರದ ಉದ್ದೇಶಕ್ಕಾಗಿ ಹೊರ ಊರಿನ ವ್ಯಾಪಾರಸ್ಥರು ರವಿವಾರ ದಿನದಂದು ನಗರಕ್ಕೆ ಬರತಕ್ಕದಲ್ಲ. ಸಾರ್ವಜನಿಕರ ಅನುಕೂಲಕ್ಕೋಸ್ಕರ ರವಿವಾರದ ಸಂತೆಯನ್ನು ಸೋಮವಾರ ಮುಂದೂಡಲಾಗಿದ್ದು, ವ್ಯಾಪಾರಸ್ಥರು ಎಂ.ಜಿ. ರಸ್ತೆ ಹೊರತುಪಡಿಸಿ ನಗರದ ಹೊರಭಾಗದ ಕಾಜುಭಾಗ, ಕೋಡಿಭಾಗ, ಬಿಣಗಾ, ಬೈತಖೋಲ್, ಬಾಂಡಿಶಿಟ್ಟಾ ಇತ್ಯಾದಿ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡಬಹುದಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸಬೇಕೆಂದು ಪೌರಾಯುಕ್ತ ಆರ್ ಪಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿವಾರ ಸಂತೆ ರದ್ದು
