• first
  second
  third
  previous arrow
  next arrow
 • ದಿ.ಅಬ್ದುಲ್ ಶೇಖ್ ಸ್ಮರಣಾರ್ಥ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

  300x250 AD


  ಅಂಕೋಲಾ: ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಸಮಾಜ ಸೇವಾ ಘಟಕ ಮತ್ತು ದಿ.ಅಬ್ದುಲ್ ಶೇಖ್‍ಅವರ ಸ್ಮರಣಾರ್ಥವಾಗಿ ಪಿ.ಎಮ್.ಹೈಸ್ಕೂಲಿನಲ್ಲಿ ಓದುತ್ತಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು. ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವಲ್ಲಿ ಸಹಾಯ ಸಹಕಾರ ಮಾಡಿದ ಸಾಮಾಜಿಕ ಕಾರ್ಯಕರ್ತ ಸೌದಿ ಅರೇಬಿಯಾದಲ್ಲಿಉದ್ಯೋಗಿಯಾಗಿರುವರಫೀಕ್ ಶೇಖ್‍ಅವರಿಗೆಅಭಿನಂದನೆ ಸಲ್ಲಿಸಲಾಯಿತು.

  ಈ ಸಂದರ್ಭದಲ್ಲಿ ಮುಖ್ಯಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಎ.ಎಮ್.ಮುಲ್ಲಾಅವರು ಮಾತನಾಡಿ ಪಿ.ಎಮ್.ಸಮಾಜ ಸೇವಾ ಘಟಕದಿಂದಉತ್ತಮ ಸಮಾಜ ಸೇವಾ ಕಾರ್ಯ ನಡೆಯುತ್ತಿದೆಎಂದರು. ನಂತರ ನಿವೃತ್ತ ಮುಖ್ಯಾಧ್ಯಾಪಕಎ.ಎಮ್.ಮುಲ್ಲಾಆವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಾಧ್ಯಾಪಕ ಎಮ್.ಎ.ನಾಯ್ಕಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇವಾ ಘಟಕದ ಕಾರ್ಯದರ್ಶಿ ಜಿ.ಆರ್.ತಾಂಡೇಲ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.

  300x250 AD

  ವೇದಿಕೆಯ ಮೇಲೆ ಸೇವಾ ಘಟಕದ ಉಪಾಧ್ಯಕ್ಷರುಗಳಾದ ಶೀಲಾ ಆಯ್ ಬಂಟ ,ಕೋಮಲ ಹಿರೇಮಠ ಉಪಸ್ಥಿತರಿದ್ದರು . ಸಾನಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಖಜಾಂಚಿ ವಿ.ಎಮ್.ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Back to top