• first
  second
  third
  previous arrow
  next arrow
 • ಮರಳುಗಾರಿಕೆಗೆ ಸರ್ಕಾರದ ಏಕ ರೂಪ ಮಾರ್ಗಸೂಚಿ ನಿರೀಕ್ಷೆ; ಡಿಸಿ

  300x250 AD

  ಕಾರವಾರ: ಮರಳು ದಿಬ್ಬಗಳ ವಿಲೇವಾರಿ ಹಾಗೂ ಹೊಸದಾಗಿ ತಾತ್ಕಾಲಿಕ ಪರವಾನಿಗೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನ ವಿಲೇವಾರಿ ಮಾಡಲು ಸರ್ಕಾರದ ಏಕ ರೂಪ ಮಾರ್ಗಸೂಚಿ ಎರಡು ದಿನದಲ್ಲಿ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

  ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಯಲ್ಲಿ 3 ಮರಳುಗಾರಿಕೆಗೆ ಅನುಮತಿ ಕೊಡುವ ಬಗ್ಗೆ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕಾರವಾರ ತಾಲೂಕು ಕಾಳಿ ನದಿಯಲ್ಲಿ 4 ಮರಳು ದಿಬ್ಬಗಳನ್ನ ತೆರುವುಗೊಳಿಸಲು 42 ಸಾಂಪ್ರದಾಯಿಕ ಮರಳನ್ನ ತೆರವುಗೊಳಿಸಲು ಪರವಾನಿಗೆ ನೀಡಲಾಗಿದೆ. ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿ ಪಾತ್ರಗಳಿಂದ ಗುರುತಿಸಲಾದ 11 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣಾ ನಿರ್ವಹಣಾ ಪ್ರಾಧಿಕಾರದಿಂದ ನಿರಾಪೇಕ್ಷಣ ಪತ್ರ ಬಂದಿದೆ ಎಂದರು.

  300x250 AD

  ಆದರೆ ಮರಳುಗಾರಿಕೆ ಅನುಮತಿಕೊಡಲು, ಹೊಸ ಅರ್ಜಿದಾರರಿಗೆ ಅವಕಾಶ ಕೊಡುವ ಬಗ್ಗೆ ಇನ್ನು ಎರಡು ದಿನದಲ್ಲಿ ಸರ್ಕಾರದ ಏಕರೂಪ ಮಾರ್ಗಸೂಚಿ ಬರುವ ನಿರೀಕ್ಷೆಯಿದ್ದು ಆ ನಂತರ ಮರಳುಗಾರಿಕೆಗೆ ಅನುಮತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top