ಕಾರವಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಇಸ್ಮಾಯಿಲ್ ದೊಡ್ಮನಿ ಎಂಬುವವರ ಮನೆಯ ಗೋಡಾನ್‌ನಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮೌಲ್ಯದ ಗಾದಿ(ಬೆಡ್)ಗೆ ಬಳಸುವ ಹತ್ತಿಗಳು ಬೆಂಕಿಗಾಹುತಿ ಆಗುವುದನ್ನು ಬಾಲಕಿ ಪ್ರಜನ್ಯಾ ನಾಯ್ಕ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾಳೆ.
ಇಲ್ಲಿನ ಗೋಡಾನ್‌ನ ಸಮೀಪದಲ್ಲೇ ವೆಲ್ಡಿಂಗ್ ಕೆಲಸ ಮಾಡಿದ್ದ ಕೆಲಸಗಾರರು, ರಾತ್ರಿ ಸುಮಾರು 10 ಗಂಟೆಯ ಬಳಿಕ ಕೆಲಸ ಮುಗಿಸಿ ವಾಪಸ್ಸಾಗಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವೆಲ್ಡಿಂಗ್ ಮಾಡುವ ಕಿಡಿ ಹತ್ತಿಗೆ ತಾಗಿದೆ ಎನ್ನಲಾಗಿದೆ. ಇದರಿಂದಾಗಿ ಹತ್ತಿಗೆ ಒಂದೇ ಸಮನೆ ಬೆಂಕಿ ಹೊತ್ತಿಕೊಂಡು ಗೋಡಾನ್‌ನಿಂದ ಹೊಗೆ ಹೊರಬರಲಾರಂಭಿಸಿದೆ. ಈ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ 12 ವರ್ಷ ವಯಸ್ಸಿನ ಪ್ರಜನ್ಯಾ ನಾಯ್ಕಕದಂಎನ್ನುವ ಬಾಲಕಿ ಮನೆಯ ಪಾಠಗಳನ್ನು ಮುಗಿಸಿ ಕೋಣೆಗೆ ಮಲಗಲು ತೆರಳುತ್ತಿದ್ದ ವೇಳೆ ಪಕ್ಕದ ಮನೆಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿದ್ದಾಳೆ. ಕೂಡಲೇ ಈ ಬಗ್ಗೆ ತನ್ನತಾಯಿಗೆ ಮಾಹಿತಿ ನೀಡಿ, ಪಕ್ಕದ ಮನೆಯವರನ್ನೆಲ್ಲಕರೆದು ಹತ್ತಿಗೆ ಬೆಂಕಿ ಹೊತ್ತಿಕೊಂಡಿರುವುದನ್ನುತೋರಿಸಿದ್ದಾಳೆ. ಅದೇ ಹೊತ್ತಿಗೆರಸ್ತೆಯಲ್ಲಿ ಸಾಗುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯ ಚಾಲಕ ರಾಘವೇಂದ್ರಅವರನ್ನುತಡೆದತಾಯಿ-ಮಗಳು ಹಾಗೂ ಪಕ್ಕದ ಮನೆಯವರು, ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿ ನೆರವುಕೋರಿದ್ದಾರೆ.
ರಾಘವೇಂದ್ರ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ವಲ್ಪ ಹೊತ್ತು ಹೆಚ್ಚು ಕಡಿಮೆಯಾಗಿದ್ದರೂ ಎಲ್ಲ ಹತ್ತಿ ಸುಟ್ಟು, ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಆವರಿಸಿಕೊಳ್ಳುವ ಆತಂಕಎದುರಾಗಿತ್ತು. ಆದರೆ ಬಾಲಕಿಯ ಸಮಯಪ್ರಜ್ಞೆಯಿಂದಾಗಿ ಸಂಭವನೀಯ ಅವಘಡತಪ್ಪಿದೆ. ಹೀಗಾಗಿ ಮಾಹಿತಿ ನೀಡಿದ್ದಕ್ಕಾಗಿಅಗ್ನಿಶಾಮಕ ಸಿಬ್ಬಂದಿ ಹಾಗೂ ಚಾಲಕ ರಾಘವೇಂದ್ರ ಬಾಲಕಿ ಪ್ರಜನ್ಯಾಳಿಗೆ ಧನ್ಯವಾದ ತಿಳಿಸಿದ್ದಾರೆ.
ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಅಧಿಕಾರಿ ದಾಮೋದರ್, ಹವಾಲ್ದಾರ ಮಹಾಬಲೇಶ್ವರ ಗೌಡ, ಚಾಲಕ ಬಸವರಾಜ ಉಳ್ಳಾಗಡ್ಡಿ, ವೀರೇಂದ್ರತಾಂಡೇಲ, ದೀಪಕ್ ಅಂಕೋಲೇಕರ್, ಹ? ನಾಯಕ, ಪ್ರವೀಣ ನಾಯ್ಕ, ಹೋಮ್‌ಗಾರ್ಡ್ ಸಂಜು ಅಂಕೋಲೇಕರ್ ಭಾಗಿಯಾಗಿದ್ದರು.