ಹೊನ್ನಾವರ: ಐಆರ್‌ಬಿ ಕೊಟ್ಟ ಭರವಸೆಯಂತೆ ಸೋಮವಾರದಿಂದ ವಿವಿಧ ಬೇಡಿಕೆ ಹಾಗೂ ಬೀದಿ ದೀಪದಕಾಮಗಾರಿ ಕೆಲಸ ಪ್ರಾರಂಭ ಮಾಡಬೇಕು ಹಾಗೆ ನಡೆದುಕೊಳ್ಳದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡುವ ನಿರ್ಧಾರ ಪ್ರಜ್ಞಾವಂತರು ಕೈಗೊಂಡಿದ್ದಾರೆ.
ತಾಲೂಕಿನ ಹಳದಿಪುರದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನಡೆದ ಅನಾಹುತಗಳಿಗೆ ರೊಚ್ಚಿಗೆದ್ದ ಸ್ಥಳೀಯರು ಬುಧವಾರ ಪ್ರತಿಭಟನೆಗೆ ಇಳಿದು ತಹಶೀಲ್ದಾರ ಸಮ್ಮುಖದಲ್ಲಿ ಗುತ್ತಿಗೆ ಅಧಿಕಾರಿಗಳು ಸೋಮವಾರದಿಂದ ಕೆಲಸ ಪ್ರಾರಂಭಿಸುತ್ತೇವೆ ಹಾಗೂ ಎಲ್ಲಾ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡದಾಗ ಪ್ರತಿಭಟನೆ ಮೊಟಕುಗೊಳಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಪ್ರಾರಂಭಿಸದೇಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು.
ಇದೆಲ್ಲದರ ಮಧ್ಯೆ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲವು ಪ್ರಜ್ಞಾವಂತರು ಮಾಹಿತಿ ಹಕ್ಕು ಅಧಿನಿಯಮದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್. ಬಿ. ಯ ನಡುವಿನ ಎಲ್ಲಾಒಪ್ಪಂದದ ಕುರಿತಂತೆ ಮಾಹಿತಿ ಪಡೆದು ನಿಗದಿತ ಸಮಯದೊಳಗೆ ಕೆಲಸ ಪ್ರಾರಂಭಿಸದೇ, ಬೇಡಿಕೆ ಈಡೇರದೇ ಇದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಹಾಗೂ ಗುತ್ತಿಗೆ ಪಡೆದಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಶಪಥ ಮಾಡಿದ್ದಾರೆ.
ಹಣದ ಮದದಿಂದ ಮೆರೆಯುತ್ತಿರುವಕಂಪನಿಯ ವಿರುದ್ಧಈಗ? ಪಂಚಾಯತ್ ಮಟ್ಟದಲ್ಲಿ ಹೋರಾಟ ನಡೆದಿದ್ದುಕೊಟ್ಟ ಭರವಸೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾದರೂಇಡಿಯಜಿಲ್ಲೆಯ ಪ್ರತಿಭಟನೆಯಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ಜಿಲ್ಲೆಯ 7 ಜನರನ್ನು ಒಳಗೊಂಡ ಸಮಿತಿರಚಿಸುವತಯಾರಿ ನಡೆಯುತ್ತಿರುವುದೇಇದಕ್ಕೆ ಪುಷ್ಟಿ ನೀಡುತ್ತಿದೆ.
ಸಾರ್ವಜನಿಕ ವಿಚಾರವಾಗಿ ನಾವು ಹೋರಾಟಕೈಗೆತ್ತಿಕೊಂಡಿದ್ದೇವೆ, ಸೋಮವಾರ ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳುವವರೆಗೂ ನಿಲ್ಲಿಸದೇ ಬೇಡಿಕೆಈಡೇರಿಸಬೇಕು. ಇಲ್ಲವಾದಲ್ಲಿ ನಾವು ಮಾಹಿತಿ ಹಕ್ಕಿನಿಂದ ಪಡೆದ ಎಲ್ಲಾ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ.
ನ್ಯಾಯಾಲಯದ ಹೋರಾಟ ಬರಿಯ ಹಳದಿಪುರಕ್ಕ? ಸೀಮಿತವಾಗುವ ಬದಲುಇಡಿಯಜಿಲ್ಲೆಯ ಹೋರಾಟವಾಗುತ್ತದೆ. ಜಿಲ್ಲೆಯ 7 ಜನರಒಂದು ಸಮಿತಿ ರಚಿಸಿ ನ್ಯಾಯಾಲಯ ಹೋರಾಟ ಮಾಡುತ್ತೇವೆ. ಐ.ಆರ್.ಬಿಯನ್ನುಕಪ್ಪು ಪಟ್ಟಿಗೆ ಸೇರಿಸುವತನಕ ಹೋರಾಟ ಕೈ ಬಿಡುವುದಿಲ್ಲ. -ರಾಮದಾಸ ನಾಯ್ಕ, ಸಾಮಾಜಿಕಕಾರ್ಯಕರ್ತ