
ಶಿರಸಿ: ತಾಲೂಕಿನಲ್ಲಿ ಮಂಗಳವಾರ 16 ಕೊರೊನಾ ಕೇಸ್ ಪತ್ತೆಯಾಗಿದ್ದು, 6 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೆಎಚ್‍ಬಿ ಕಾಲೋನಿಯಲ್ಲಿ 1, ಬಾಪೂಜಿ ನಗರ 3, ಆಶಾ ಪ್ರಭು ಆಸ್ಪತ್ರೆ ಹತ್ತಿರ 2, ಹೂತನಜಾನ್ಮನೆ 1, ಬಪ್ಪನಳ್ಳಿ ರಸ್ತೆ 2, ಭಾಂಶಿ ಬನವಾಸಿ 2, ನೆಹರು ನಗರ 1, ಆರ್ ನ್‍ಎಸ್ 1, ಹುಲೇಕಲ್ ಶಿರಸಿ 3 ಕೇಸ್ ದೃಢಪಟ್ಟಿದೆ.
ತಾಲೂಕಿನಲ್ಲಿ ಈವರೆಗೆ 6838 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 6716(98%) ಮಂದಿಯಲ್ಲಿ ಗುಣಮುಖರಾಗಿದ್ದಾರೆ. 6 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 51 ಮಂದಿ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.