ಕಾರವಾರ: ಗೋವಾ ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಮಾಣ ಹೆಚ್ಚಾದ್ದರಿಂದ ಮಹಾರಾಷ್ಟ್ರ,ಕೇರಳ ರಾಜ್ಯಕ್ಕೆ ವಿಧಿಸಿದ ಮಾರ್ಗಸೂಚಿಯಂತೆ ಗೋವಾ ರಾಜ್ಯದ ಜನರು ಕಾರವಾರಕ್ಕೆ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ.
ಗೋವಾ ರಾಜ್ಯದಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಲು 72 ಗಂಟೆಯ ಆರ್.ಟಿ.ಪಿ.ಸಿ.ಆರ್ ಹಾಗೂ ಎರಡು ಸುತ್ತಿನ ಕೊವಿಡ್ ಲಸಿಕೆ ಪಡೆದಿರಬೇಕು.ಇಂತವರಿಗೆ ಮಾತ್ರ ಪ್ರವೇಶ ನೀಡಲು ಜ.5 ರ ರಾತ್ರಿ 10 ಘಂಟೆ ಯಿಂದ ಈ ಆದೇಶ ಜಾರಿಗೆ ಬರಲಿದೆ.
ಈಗಾಗಲೇ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ, ಜೋಯಿಡಾ ತಾಲೂಕಿನ ಅನ್ ಮೋಲ್, ಬರ್ಚಿ,ಭಟ್ಕಳದ ಶಿರೂರು ಭಾಗದಲ್ಲೊ ಚಕ್ ಪೋಸ್ಟ್ ಮಾಡಲಾಗಿದೆ. ಇದರ ಜೊತೆ ಅಂತರ್ ಅಂತರ್ ಜಿಲ್ಲೆಯ ಯಲ್ಲಾಪುರ,ಮುಂಡಗೋಡಿನ ಮಾಚಣಕಿ,ಹಳಿಯಾಳದ ಮಾವಿನ ಕೊಪ್ಪ,ಶಿರಸಿಯ ಚಿಪಗಿ ,ಸಿದ್ದಾಪುರದ ಚೂರಿಕಟ್ಟೆ ಯಲ್ಲಿ ಚಕ್ ಪೋಸ್ಟ್ ತೆರೆಯಲು ಸೂಚಿಸಲಾಗಿದೆ. ಇನ್ನು ಹೊಸವರ್ಷದ ಸಂಭ್ರಮಕ್ಕೆ ಜಿಲ್ಲೆಯ ಜನರು ಗೋವಾಕ್ಕೆ ತೆರಳಿ ಬಂದಿರುವುದರಿಂದ ಸೋಂಕು ಹೆಚ್ಚಾಗದಂತೆ ತಡೆಯಲು ವಿಲೇಜ್ ಲೆವಲ್ ಹಾಗೂ ವಾರ್ಡ ಲೆವಲ್ ಟಾಸ್ಕ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ.ಇದರ ಜೊತೆಗೆ ನಾಳೆಯಿಂದಲೇ ಜಾರಿಗೆ ಬರುವಂತೆ ತಾಲೂಕು ಲೆವೆಲ್ ಕಂಟ್ರೋಲ್ ರೂಮ್ ವ್ಯವಸ್ಥೆಯನ್ನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉಳಿದಂತೆ ರಾಜ್ಯಸರ್ಕಾರದ ಮಾರ್ಗಸೂಚಿಯಂತೆ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಇರಲಿದೆ.
ಜಿಲ್ಲೆಯಿಂದ ಗೋವಾಕ್ಕೆ ತೆರಳುವ ಕಾರ್ಮಿಕರಿಗೆ ವಾರದ ಪಾಸ್: ಗೋವಾಕ್ಕೆ ಪ್ರತಿ ದಿನ ಹೋಗಿಬರುವ ಕಾರ್ಮಿಕರಿಗೆ ಒಂದು ವಾರದ ಪಾಸ್ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಸೂಚಿಸಿದ್ದಾರೆ. ಇದರ ಜೊತೆಗೆ ಪ್ರತಿ ವಾರ RTPCR ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು ನಂತರವಷ್ಟೇ ಪಾಸ್ ನೀಡಲು ಸೂಚಿಸಲಾಗಿದೆ.
ದೇವಸ್ಥಾನಗಳಿಗೂ ನಿರ್ಬಂಧ: ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ,ಮುರುಡೇಶ್ವರ ಈಶ್ವರ ದೇವಸ್ಥಾನ,ಇಡಗುಂಜಿಯ ಮಹಾಬಲೇಶ್ವರ ದೇವಸ್ಥಾನ,ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ 50 ಜನರ ಸರತಿಯಂತೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಅಥವಾ ಎರಡು ಡೋಸ್ ಲಸಿಕೆ ಪಡೆದ ಸರ್ಟಿಫಿಕೇಟ್ ಇರಬೇಕು.ಆದರೆ ಗೊವಾ,ಮಹಾರಾಷ್ಟ್ರ,ಕೆ ಕೇರಳ ರಾಜ್ಯದವರಿಗೆ 72 ತಾಸಿನ ಆರ್.ಟಿ.ಪಿ.ಸಿ.ಆರ್ ಕಡ್ಡಾಯವಾಗಿರುತ್ತದೆ. ಉಳಿದಂತೆ ರಾಜ್ಯದ ನಿಯಮಗಳು ಅನ್ವಯಿಸುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲ್ ತಿಳಿಸಿದ್ದಾರೆ.
ಮಾಸ್ಕ ಧರಿಸದವರಿಗೆ ದಂಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನುಮುಂದೆ ಕಡ್ಡಾಯವಾಗಿ ಜನರು ಮಾಸ್ಕ ಧರಿಸಬೇಕು. ಹೊಸ ನಿಯಮದಂತೆ ನಾಳೆಯಿಂದ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ರವರು ಸೂಚಿಸಿದ್ದಾರೆ. ಇದಲ್ಲದೆ ಜಿಲ್ಲಾ ಗಡಿ ಹಾಗೂ ಅಂತರ್ ಜಿಲ್ಲಾ ಗಡಿಯಲ್ಲಿ ತಪಾಸಣೆಗಾಗಿ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಮಾಡುವುದಾಗಿ ತಿಳಿಸಿದ್ದಾರೆ.