ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲು.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.7 ಶುಕ್ರವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತುರಬಾನಗರ 11 ಕೆ.ವಿ ಮಾರ್ಗದ ಮರಾಠಿಕೊಪ್ಪ, ಲಯನ್ಸ್‌ನಗರ, ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿ ನಗರ, ವಿದ್ಯಾನಗರ, ಡಿಪೊ, ಬಸಟ್ಟಿಕೆರೆ, ಕಾಲೇಜು ರಸ್ತೆಪ್ರದೇಶಗಳಲ್ಲಿ, ಗ್ರಾಮೀಣ-1 ಶಾಖೆಯ ತಾರಗೋಡ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.