ಶಿರಸಿ: ಇಲ್ಲಿನ ದ್ರುವತಾರೆ ಸಾಂಸ್ಕೃತಿಕ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ಅಮರ ಕಾರ್ಯಕ್ರಮ ಜ.16 ರವಿವಾರ ಬೆಳಗ್ಗೆ 9. 30ಕ್ಕೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಹೆಚ್ ಗಣೇಶ್ ಹೇಳಿದರು.
ನಗರದ ನೆಮ್ಮದಿ ಕುಟೀರ ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬೆಳಿಗ್ಗೆ ರಕ್ತದಾನ ಹಾಗೂ ನೇತ್ರದಾನ ಶಿಬಿರ ನಡೆಯಲಿದೆ. ಸಂಜೆ 5. 30ರಿಂದ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದೆ.
ಇದೇ ಸಮಯದಲ್ಲಿ ಹೆಚ್ ಗಣೇಶ್ ರವರ 4ನೇ ಕೃತಿ “ರೆಕ್ಕೆಗಳಿದ್ದರೆ ” ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಕಿಶೋರ್ ನೇತ್ರಕರ್ , ರಾಜು ಕದಂ, ಮಂಜು ಶೆಟ್ಟಿ , ಭಾಸ್ಕರ್ ನಾಯ್ಕ ಉಪಸ್ಥಿತರಿದ್ದರು.