ಶಿರಸಿ: ಶಿರಸಿ ಮತ್ತು ಬನವಾಸಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.
ಹಾನಗಲ್ ನಿಂದ ಶಿರಸಿಗೆ ಗಾಂಜಾ ಸಾಗಾಟ ನಡೆಸುತ್ತಿದ್ದಾಗ ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದ ಬನವಾಸಿ ಪಿಎಸ್‍ಐ ಹನುಮಂತ ಬಿರಾದಾರ ಮತ್ತು ಸಿಬ್ಬಂದಿಗಳು ಸೇರಿ ಓರ್ವನನ್ನು ವಶಕ್ಕೆ ಪಡೆದು, ಆತನಿಂದ ಸುಮಾರು 1 ಕೆಜಿಗೂ ಹೆಚ್ಚಿನ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಶಿರಸಿ ಡಿಎಸ್‍ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.