ಯಲ್ಲಾಪುರ: ತಾಲೂಕಿನ ಕಾಳಗನಕೊಪ್ಪದ ಗ್ರಾಮದಲ್ಲಿ ಹುಲ್ಲಿನ ಬಣವೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಇಂದು ಜರುಗಿದೆ.
ಕಾಳಗನಕೋಪ್ಪ ಗ್ರಾಮದ ಮಾರುತಿ ಪಾಟೀಲ ಎಂಬವರ ಎರಡು ಎಕರೆಯ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, 30 ಸಾವಿರಕ್ಕೂ ಅಧಿಕ ಮೌಲ್ಯದ ಭತ್ತ ನಾಶವಾಗಿದೆ. ಇದರಿಂದ ಅರ್ಧಕ್ಕಿಂತಲು ಹೆಚ್ಚಿನ ಪ್ರಮಾಣದ ಹುಲ್ಲು ಸುಟ್ಟು ಕರಕಲಾಗಿದೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಆದರೆ ಒಣಗಿದ ಹುಲ್ಲಾಗಿದ್ದ ಪರಿಣಾಮ ಅರ್ಧದಷ್ಟು ಸುಟ್ಟು ಹೋಗಿದ್ದು ಅಪಾರ ಹಾನಿ ಸಂಭವಿಸಿದೆ.