• Slide
  Slide
  Slide
  previous arrow
  next arrow
 • ಪಾಳು ಬಿದ್ದ ಜೊಯಿಡಾ ಕನ್ನಡ ಭವನ; B.N.ವಾಸರೆ ಅಸಮಾಧಾನ

  300x250 AD


  ಕಾರವಾರ: ತಾಲೂಕಿನ ಜೋಯಿಡಾದ ಕನ್ನಡ ಭವನದ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಇದನ್ನು 3 ದಿನಗಳ ಒಳಗಡೆ ಸರಿಪಡಿಸದೇ ಇದ್ದಲ್ಲಿ ನಾವೇ ಖುದ್ದಾಗಿ ಸರಿಪಡಿಸುವುದಾಗಿ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.

  ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಮಾಲೋಚನಾ ಸಭೆಯನ್ನು ಪೂರ್ವ ನಿಗದಿಯಾದಂತೆ ಜೊಯಿಡಾದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು,ಈ ಕಾರ್ಯಕ್ರಮ ಸಂಘಟನೆಯ ಕುರಿತಾಗಿ ಸ್ಥಳೀಯ ಕಸಾಪ ಸದಸ್ಯರು ತಹಶೀಲ್ದಾರರಿಗೆ ಮೊದಲೇ ಮಾಹಿತಿಯನ್ನು ನೀಡಿ ಕನ್ನಡ ಭವನವನ್ನು ಸ್ವಚ್ಚಗೊಳಿಸಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವಂತೆ ನಿವೇದಿಸಿಕೊಂಡಿದ್ದರು. ಹಾಗೆ ನಿಗದಿತ ಕಾರ್ಯಕ್ರಮ ಮಾಡಲೆಂದು ಕನ್ನಡ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಕನ್ನಡ ಭವನದಲ್ಲಿ ಸಭೆ ನಡೆಸಲಾಗದಷ್ಟು ಅವ್ಯವಸ್ಥೆಯ ಆಗರವಾಗಿರುವುದು ಕಂಡು ಬಂದಿದೆ.

  ಇದೇ ಸಂದರ್ಭದಲ್ಲಿ ಕನ್ನಡ ಭವನಕ್ಕೆ ಭೇಟಿ ಮಾಡಿ ಅಲ್ಲಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ಅವರು ಕನ್ನಡ ಭವನದ ಒಳಗಡೆ ಯಾವುದೇ ಸ್ವಚ್ಚತೆ ಇರಲಿಲ್ಲ. ಧೂಳು, ಕಸಕಡ್ಡಿಗಳು ತುಂಬಿ ಕೊಂಡಿದ್ದವು. ಭವನದ ಒಳಗಡೆ ಗಬ್ಬುನಾರುವ ಸ್ಥಿತಿ ಇತ್ತು. ವಿದ್ಯುತ್ ಸಂಪರ್ಕವನ್ನು ಕೂಡ ಕಡಿತ ಮಾಡಲಾಗಿತ್ತು . ಹೊರ ಆವರಣದಲ್ಲಿ ಮದ್ಯದ ಬಾಟಲಿಗಳು ಹಾಗೂ ಇನ್ನಿತರೆ ತ್ಯಾಜ್ಯಗಳು ಬಿದ್ದು ಕೊಂಡಿದ್ದವು. ಕನ್ನಡ ಭವನದ ಒಳ ಹಾಗೂ ಹೊರ ಆವರಣದಲ್ಲಿ ಯಾವುದೇ ನಿರ್ವಹಣೆ ಇರಲಿಲ್ಲ. ಕನ್ನಡ ಭವನವನ್ನು ನಿರ್ವಹಣೆ ಮಾಡುವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸಿತು ಎಂದರು. ಕನ್ನಡ ಭವನದ ಈ ದುಸ್ಥಿತಿಯನ್ನು ಕಂಡೂ ಸುಮ್ಮನಾಗುವ ಮನಸ್ಸಾಗಲಿಲ್ಲ. ಹಾಗಾಗಿ ಅದೇ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಾಹಿತ್ಯಾಸಕ್ತರ ಜೊತೆ ಸೇರಿ ಕನ್ನಡ ಭವನದ ಮೆಟ್ಟಿಲುಗಳ ಮೇಲೆ ಕುಳಿತು ಹಠಾತ್ ಧರಣಿಯನ್ನು ಆರಂಭಿಸಿದೆವು.


  ಧರಣಿಯ ಮಾಹಿತಿ ತಿಳಿದು ತಹಶೀಲ್ದಾರ್ ಕಾರ್ಯಾಲಯದ ಶಿರಸ್ತೇದಾರ ವಕ್ಕುಂದರವರು ಅವರು ಸ್ಥಳಕ್ಕೆ ಆಗಮಿಸಿ ನಮ್ಮ ಜೊತೆ ಮಾತುಕತೆ ನಡೆಸಿದರು. ನಾವು ಈಗಾಗಲೇ ಈ ಕನ್ನಡ ಭವನದ ನಿರ್ವಹಣೆಯನ್ನು ಮಾಡುವಂತೆ ಬೇರೊಂದುಇಲಾಖೆಯವರಿಗೆ ತಿಳಿಸಿದ್ದೆವು. ಆದರೆ ಅವರು ಇಲ್ಲಿಯವರೆಗೂ ಮಾಡಿಲ್ಲ. ಆ ಕಾರಣದಿಂದ ಈ ಅವಸ್ಥೆಯಾಗಿದೆ. ಸಾಹಿತ್ಯ ಪರಿಷತ್ತಿನ ಸಭೆ ನಡೆಸಲುಅನಾನುಕೂಲತೆಯಾಗಿದೆ. ಅದಕ್ಕಾಗಿ ವಿಷಾದಿಸುತ್ತೇವೆ ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದರು.

  ಇದೇ ಸಂದರ್ಭದಲ್ಲಿ ದೂರವಾಣಿಕರೆ ಮಾಡಿ ಮಾತನಾಡಿದ ತಹಶೀಲ್ದಾರ ಸಂಜಯ ಕಾಂಬಳೆಯವರು ಕನ್ನಡ ಭವನದ ನಿರ್ಮಾಣಕ್ಕೆ ನಮಗೆ ಯಾವುದೇಅನುದಾನ ಬರುತ್ತಿಲ್ಲ. ಆದಾಗ್ಯೂ ಸ್ಥಳೀಯ ಸಾಹಿತ್ಯ ಪ್ರೇಮಿಗಳು ನಿವೇದಿಸಿಕೊಂಡ ಹಿನ್ನಲೆಯಲ್ಲಿ ನಾವು ಬೇರೊಂದುಇಲಾಖೆಯವರಿಗೆ ಮನವಿ ಮಾಡಿದ್ದೆವು . ಆದರೆಅವರು ಈವರೆಗೂ ದುರಸ್ತಿ ಕಾರ್ಯ ಮಾಡದಕಾರಣ ಈ ಅನಾನುಕೂಲತೆಯಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

  300x250 AD

  ಜೋಯಿಡಾ ಗಡಿ ತಾಲೂಕಾಗಿದ್ದು, ಕೆಲ ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿಚಂದ್ರು ಹಾಗೂ ಕನ್ನಡಅಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿದ್ದ ವಿಷ್ಣು ನಾಯ್ಕರ ಪ್ರಯತ್ನದಿಂದಾಗಿ ನಿರ್ಮಾಣವಾಗಿರುವ ಈ ಕನ್ನಡ ಭವನವನ್ನು ಸರಿಯಾಗಿ ನಿರ್ವಹಿಸಬೇಕಾದ ಜವಾಬ್ದಾರಿ ತಾಲೂಕಾಡಳಿತದ್ದಾಗಿದ್ದು,ಈಗ ಕನ್ನಡ ಭವನ ದನದ ಕೊಟ್ಟಿಗೆಯಂತಾಗಿದೆ. ಕನ್ನಡ ಭವನದ ಸ್ಥಿತಿ ಈ ರೀತಿಯಾಗಿದ್ದರೆ ಸಹಿಸಲಾಗದು ಎಂದು ಬೇಸರ ವ್ಯಕ್ತಪಡಿಸಿದರು.


  ಇನ್ನೂ 3 ದಿನಗಳ ಒಳಗಡೆ ಈ ಕನ್ನಡ ಭವನವನ್ನು. ಸ್ವಚ್ಚಗೊಳಿಸಬೇಕು. ಸುಣ್ಣ ಬಣ್ಣಗಳನ್ನು ಬಳಿದು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು.ಕನ್ನಡದ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತಾಗಬೇಕು. ಒಂದೊಮ್ಮೆ 3 ದಿನಗಳ ಒಳಗಡೆ ಕನ್ನಡ ಭವನವನ್ನು ಸ್ವಚ್ಚಗೊಳಿಸುವ ಕೆಲಸ ಆಗದೇಇದ್ದಲ್ಲಿತಾಲ್ಲೂಕಿನ ದಾನಿಗಳ ಹಾಗೂ ಸದಸ್ಯರ ಸಹಾಯ ಪಡೆದುಕನ್ನಡ ಸಾಹಿತ್ಯ ಪರಿಷತ್ ನಿಂದಲೇಇದನ್ನು ಸ್ವಚ್ಛಗೊಳಿಸುವ ಹಾಗೂ ನಿರ್ವಹಿಸುವ ಕೆಲಸ ಮಾಡಲಾಗುವುದು ಎಂದರು.
  ನಂತರ ಮಾತನಾಡಿದ ತಹಶೀಲ್ದಾರರು ಕನ್ನಡ ಭವನದ ಸಂಪೂರ್ಣ ಸ್ವಚ್ಛತೆಯನ್ನುಇನ್ನು 3 ದಿನಗಳ ಒಳಗಡೆ ನಾವೇ ಮಾಡಿಸಿ, ಕನ್ನಡದ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಆ ಹಿನ್ನೆಲೆಯಲ್ಲಿ ಹಠಾತ್ತಾಗಿ ನಡೆಸಿದ ಧರಣಿಯನ್ನು ಹಿಂಪಡೆದುಕೊಳ್ಳಲಾಯಿತು.

  ನಮ್ಮ ಬೇಡಿಕೆಯಂತೆ ತಹಸೀಲ್ದಾರರು 3ದಿನಗಳ ಒಳಗಡೆ ಕನ್ನಡ ಭವನವನ್ನು ದುರಸ್ತಿಪಡಿಸಿ ಸುಸಜ್ಜಿತ ಗೊಳಿಸುವುದಾಗಿ ಭರವಸೆ ನೀಡಿರುವುದು ನಿಜಕ್ಕೂಕೂಡ ಸಂತಸತಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಜೋಯಿಡಾಕನ್ನಡ ಭವನ ಈ ರೀತಿಯಾದಅವ್ಯವಸ್ಥೆಗೆತಲುಪದರೀತಿಯಲ್ಲಿಕನ್ನಡ ಸಾಹಿತ್ಯ ಪರಿಷತ್ತು ಕಾಳಜಿ ವಹಿಸುತ್ತದೆಎಂದು ಕಸಪಾ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.

  ಈ ಸಂದರ್ಭದಲ್ಲಿಕನ್ನಡ ಸಾಹಿತ್ಯ ಪರಿಷತಾ ಜೋಯಿಡಾ ತಾಲೂಕಾ ನಿಕಟಪೂರ್ವ ಅಧ್ಯಕ್ಷರಾದ ಸುಭಾμïಗಾವಡಾ, ಆಜೀವ ಸದಸ್ಯರುಗಳಾದ ಎ.ಆರ್. ದೇಸಾಯಿ, ಗಿರೀಶ ಪಾಟೀಲ್ , ಸಂದೇಶ್‍ದೇಸಾಯಿ, ಗಿರೀಶ ಭಾಗ್ವತ್. ಸದಾನಂದದಬ್ಗಾರ, ತುಕಾರಾಮ ಮಾಂಜ್ರೇಕರ್, ಶಕುಂತಲಾ ಹಿರೆಗೌಡರ, ಟಿ.ಕೆ. ದೇಸಾಯಿ, ಸೂರಜ್ ಹಿರೇಗೌಡರ್, ಸೀತಾ ದಾನಗೇರಿ, ಸುಕನ್ಯಾದೇಸಾಯಿ, ಎಲ್. ಜಿ. ನಾಯ್ಕ ಮುಂತಾದವರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top