• Slide
  Slide
  Slide
  previous arrow
  next arrow
 • ಅಧಿಕಾರದ ಹಿಂದೆ ಹೋಗಿಲ್ಲ ಆದರೆ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುವೆ; ನಿವೇದಿತಾ ಆಳ್ವ

  300x250 AD

  ಸಿದ್ದಾಪುರ: ತಾಲೂಕಿನ ಬಿಳಗಿ ಸರಕಾರಿ ಪ್ರಾಥಮಿಕ ಶಾಲೆಗೆ ಆಳ್ವಾ ಫೌಂಡೇಷನ್, ನೀಲೆಕಣಿ ಕುಟುಂಬ ಸಹಯೋಗದೊಂದಿಗೆ ಆಟದ ಪರಿಕರವನ್ನು ನೀಡಲಾಯಿತು.
  ಕಾರ್ಯಕ್ರಮ ಉದ್ಘಾಟಿಸಿದ ಆಳ್ವಾಫೌಂಡೇಷನ್ ನಿವೇದಿತಾ ಆಳ್ವ ಮಾತನಾಡಿ, ಪಟ್ಟಣದ ಶಾಲೆಗಳಲ್ಲಿ ಸುಸಜ್ಜಿತ ಆಟದ ಮೈದಾನಗಳ ಜೊತೆಗೆ ಉತ್ತಮ ಆಟದ ಪರಿಕರಗಳು ಇರುತ್ತವೆ ಆದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಆಟದ ಪರಿಕರಗಳು ಇರುವುದಿಲ್ಲ ಆದ್ದರಿಂದ ಆಳ್ವಾಫೌಂಡೇಷನ್, ನೀಲೆಕಣಿ ಕುಟುಂಬದ ಸಹಯೋಗದೊಂದಿಗೆ 2.5ಲಕ್ಷರೂ.ಮೌಲ್ಯದ ಆಟದ ಪರಿಕರವನ್ನು ನೀಡಲಾಗಿದೆ. ಶಿರಸಿಯ ಆರು ಶಾಲೆಗೆ ಹಾಗೂ ಸಿದ್ದಾಪುರದ ಎರಡು ಶಾಲೆಗಳಿಗೆ ಈ ಪರಿಕರವನ್ನು ನೀಡಲಾಗಿದೆ ಎಂದು ಹೇಳಿದರು.
  ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವುದರ ಜೊತೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಜಿಲ್ಲೆಯ ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಈಗ ಪಕ್ಷ ತೀರ್ಮಾನಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ವಿಧಾನಸಭೆಗೆ ಟಿಕೆಟ್ ನೀಡಿದರೆ ಖಂಡಿತವಾಗಿ ಸ್ಪರ್ಧಿಸುತ್ತೇನೆ. ನಾನು ಯಾವಾಗಲು ಅಧಿಕಾರದ ಹಿಂದೆ ಹೋದವನಲ್ಲ ಅವಕಾಶ ಸಿಕ್ಕಾಗ ಅಭಿವೃದ್ಧಿಯ ಕೆಲಸವನ್ನು ಉತ್ತಮವಾಗಿ ಮಾಡಿದ್ದೇನೆ. ಸರಕಾರದಲ್ಲಿ ದುಡ್ಡಿಲ್ಲ ಎನ್ನುವುದು ಸುಳ್ಳು ಜನಪ್ರತಿನಿಧಿಗಳಿಗೆ ಕೆಲಸ ಮಾಡಿಸುವ ಇಚ್ಚಾಶಕ್ತಿಯ ಕೊರತೆ ಇದೆ. ನಾನು ಕರಾವಳಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಸಾಕಷ್ಟು ಅನುದಾನ ತಂದಿದ್ದೆ ಈಗ ಕರಾವಳಿ ಪ್ರಾಧಿಕಾರದಿಂದ ಯಾಕೆ ಅನುದಾನ ಬರುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
  ಈ ಸಂದರ್ಭದಲ್ಲಿ ಸತೀಶ ನಾಯ್ಕ ಶಿರಸಿ, ಸಾವೆರ್ ಡಿಸಿಲ್ವಾ, ಪ್ರಶಾಂತ ನಾಯ್ಕ ಹೊಸೂರು, ಗಾಂಧೀಜಿ ನಾಯ್ಕ, ನಾಸೀರವಲ್ಲಿಖಾನ್, ಅಬ್ದುಲ್, ಚಂದ್ರಕಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top