ಯಲ್ಲಾಪುರ: ತಾಲೂಕಿನ ಮಾಗೋಡ ಸಮೀಪದ ಕಿರಕುಂಭತ್ತಿಯಲ್ಲಿ ದಿವ್ಯ ಸ್ಮರಣೋತ್ಸವದ ಪ್ರಯುಕ್ತ ನಡೆದ ಪಾದುಕಾ ಪ್ರದಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ವೆಂಕಟ್ರಮಣ ಭಟ್ಟ ಚಂದಗುಳಿ, ಮದ್ದಲೆವಾದಕರಾಗಿ ಶಂಕರ ಭಾಗ್ವತ ಭಾಗವಹಿಸಿದ್ದರು. ವಿದ್ವಾನ್ ಉಮಾಕಾಂತ ಭಟ್ಟ, ಎಂ.ಎನ್.ಹೆಗಡೆ ಹಳವಳ್ಳಿ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಶಿವರಾಮ ಭಟ್ಟ ಮೊಟ್ಟೆಗದ್ದೆ ಪಾತ್ರ ಚಿತ್ರಣ ನೀಡಿದರು.
ಸಂಘಟಕರಾದ ಓಂಕಾರ ಭಟ್ಟ, ರಾಮಕೃಷ್ಣ ಭಟ್ಟ ಕಲಾವಿದರನ್ನು ಗೌರವಿಸಿದರು. ವೆಂಕಟ್ರಮಣ ಭಟ್ಟ ಕಿರಕುಂಭತ್ತಿ ನಿರ್ವಹಿಸಿದರು.