ಹಳಿಯಾಳ: ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ತಾಂತ್ರಿಕ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಬ್ಲೂಪ್ರಿಸಮ್ ವಿಶ್ವವಿದ್ಯಾಲಯದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಚಿತವಾಗಿ ರೊಬೋಟಿಕ್ಸ್ ತರಬೇತಿ ಪಡೆದುಕೊಳ್ಳಬಹುದು.
ಭವಿಷ್ಯದ ತಾಂತ್ರಿಕ ಕ್ಷೇತ್ರದ ಅವಶ್ಯಕತೆಗಳಿಗನುಸಾರವಾಗಿ ವಿದ್ಯಾರ್ಥಿಗಳಿಗೆ ಈ ತರಬೇತಿ ಸೌಲಭ್ಯ ಒದಗಿಸಲಾಗುತ್ತಿದೆ. ರೊಬೋಟಿಕ್ಸ್ ಕುರಿತಾದ ಅನೇಕ ಕೋರ್ಸ್‍ಗಳನ್ನು ಬ್ಲೂಪ್ರಿಸಮ್ ಅಕಾಡೆಮಿಯಾ ಪ್ರೋಗ್ರಾಂ ಎಂಬ ಹೆಸರಿನಡಿಯಲ್ಲಿ ನಡೆಸಲಾಗುತ್ತಿದ್ದು, ತರಬೇತಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಮಹಾವಿದ್ಯಾಲಯ ಒದಗಿಸುತ್ತದೆ. ಗೂಗಲ್, ಮೈಕ್ರೋಸಾಫ್ಟ್‍ನಂತಹ ಪ್ರಖ್ಯಾತ ಕಂಪನಿಗಳಿಗೆ ರೋಬೋಟಿಕ್ಸ್ ತಂತ್ರಜ್ಞಾನ ನೀಡುವ ಬ್ಲೂಪ್ರಿಸಮ್ ವಿಶ್ವದರ್ಜೆಯ ಗುಣಮಟ್ಟದ ಕೋರ್ಸ್‍ಗಳನ್ನು ನೀಡುತ್ತಿದೆ ಎಂದು ಪ್ರಾಂಶುಪಾಲ ಡಾ. ವಿ.ಎ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.