
ಹೊನ್ನಾವರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಮಂಗೇಶ ಬೇಂಡೆಯವರ ಹಿರಿಯ ಸಹೋದರಿ ಮಾತೃ ಸ್ವರೂಪಿ ಹೊನ್ನಾವರ ಪಟ್ಟಣದ ರಾಯಲಕೇರಿಯ ಮೋಹಿನಿ ಶ್ರೀಧರ ಕಿಣಿ (86) ಅವರು ವಯೋಸಹಜ ಅನಾರೋಗ್ಯದಿಂದ ಸ್ವರ್ಗಸ್ಥರಾದರು. ಉದ್ಯಮಿ ಶಾಮ್ ಕಿಣಿಯವರ ತಾಯಿ ಹಿರಿಯರಾಗಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಇವರಿಗೆ ಈರ್ವರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.