• Slide
    Slide
    Slide
    previous arrow
    next arrow
  • 3 ವರ್ಷದಿಂದ ಪ್ರಾರಂಭವಾದ ಸೇತುವೆ ಕಾಮಗಾರಿ ಅಪೂರ್ಣ; ಗುತ್ತಿದಾರರ ವಿರುದ್ಧ ಸ್ಥಳೀಯರ ಆಕ್ರೋಶ

    300x250 AD

    ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರ್ಗಲ್-ದೇವಳಮಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೋಟ್ಯಾಂತರ ರೂ.ವೆಚ್ಚದ ರಸ್ತೆ ಹಾಗೂ ಸೇತುವೆ ಕಾಮಗಾರಿಯು ಅಪೂರ್ಣಗೊಂಡಿದ್ದು, ಗ್ರಾಮಸ್ಥರು ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.


    ಗಾಂಧಿ ಪಥ-ಗ್ರಾಮ ಪಥ ಯೋಜನೆಯಲ್ಲಿ ಅಂದಾಜು 4 ಕೋಟಿ 22 ಲಕ್ಷರೂ. ವೆಚ್ಚದಲ್ಲಿ ದೇವಳಮಕ್ಕಿ-ಬರ್ಗಲ್‍ರಸ್ತೆ ಹಾಗೂ ಸೇತುವೆಕಾಮಗಾರಿಯನ್ನು ಕಳೆದ 3 ವರ್ಷಗಳ ಹಿಂದೆಯೇ ಪ್ರಾರಂಭಿಸಲಾಗಿತ್ತು. ಆದರೂ ಸಹ ಸೇತುವೆಯ ನಿರ್ಮಾಣದ ಕಾರ್ಯವನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸದೇ ಅರೆಬರೆ ಕಾಮಗಾರಿ ಕೈಗೊಂಡು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


    ಬರ್ಗಲ್ ಭಾಗದ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಾಗೂ ಸ್ಥಳೀಯರು ದಿನದಿತ್ಯದ ಕೆಲಸ ಕಾರ್ಯಗಳಿಗಾಗಿ ದೇವಳಮಕ್ಕಿ ಗ್ರಾಮಕ್ಕೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದರು. ಅಲ್ಲದೇ, ದೇವಳಮಕ್ಕಿಯಿಂದ ಈ ರಸ್ತೆಯ ಮೂಲಕ ಕಾರವಾರಕ್ಕೆ ಆಗಮಿಸಲು 5 ಕಿ.ಮೀ ಅಂತರವಿರುವುದರಿಂದ ಹಲವರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ.


    ಕಾಮಗಾರಿ ಪ್ರಾರಂಭಗೊಂಡು ಹಲವು ವರ್ಷಗಳೇ ಕಳೆದರೂ ಸೇತುವೆಯ ಕೆಳಗಡೆ ಭಾಗದಲ್ಲಿನ ಎರಡು ಕಡೆಯ ತಡೆಗೋಡೆ ಹಾಗೂ ಪಿಚ್ಚಿಂಗ್ ಕಾರ್ಯ ಇನ್ನೂ ಮುಗಿದಿಲ್ಲ. ಅಲ್ಲದೇ, ಸೇತುವೆ ಮೇಲ್ಭಾಗದಲ್ಲಿಯೂ ಸಹ ಕಾಮಗಾರಿ ಅಪೂರ್ಣಗೊಂಡಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲು ಬರ್ಗಲ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    300x250 AD


    ಗುತ್ತಿಗೆದಾರರು ಸರಿಯಾದರೀತಿಯಲ್ಲಿ ಕೆಲಸ ನಿರ್ವಹಿಸದ ಪರಿಣಾಮಕೋಟ್ಯಾಂತರರೂ. ವೆಚ್ಚದ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರೀಶಿಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು – ಶಶಿಕಾಂತ ಗಾಂವಕರ (ಬರ್ಗಲ್‍ಗ್ರಾಮಸ್ಥ)


    ದೇವಳಮಕ್ಕಿ ಭಾಗದ ಪ್ರಯಾಣಿಕರು ಹಾಗೂ ಅನಾರೋಗ್ಯ ಪೀಡಿತರನ್ನು ಈ ಮಾರ್ಗದ ಮೂಲಕವೇ ಕಾರವಾರಕ್ಕೆಕರೆದೊಯ್ಯುತ್ತೇವೆ. 5-6 ಕಿ.ಮೀ ಅಂತರವಿರುವುದರಿಂದ ಹಲವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಸಂಬಂಧಿಸಿದ ಇಲಾಖೆ ಶೀಘ್ರದಲ್ಲೇ ರಸ್ತೆ ಹಾಗೂ ಸೇತುವೆಕಾಮಗಾರಿ ಪೂರ್ಣಗೊಳಿಸಿ, ಜನತೆಗೆ ಅನುಕೂಲ ಕಲ್ಪಿಸಬೇಕು. – ವಿದ್ಯಾಧರಗೌಡ, ಶಿರ್ವೆ (ರಿಕ್ಷಾ ಚಾಲಕ)


    ಖರ್ಚು ವೆಚ್ಚದ ಮಾಹಿತಿಯಿಲ್ಲದ ಫಲಕ: ಈ ಕಾಮಗಾರಿಗೆಗಾಂಧಿ ಪಥ-ಗ್ರಾಮ ಪಥಯೋಜನೆಯಲ್ಲಿಅಂದಾಜು 4 ಕೋಟಿ 22 ಲಕ್ಷರೂ. ಮಂಜೂರಿಯಾಗಿದೆ. ಆದರೆಗುತ್ತಿಗೆದಾರರ ಹಾಗೂ ಸಂಬಂಧಿಸಿದ ಇಲಾಖೆಯವರು ಅಳವಡಿಸಿದ ಮಾಹಿತಿ ಫಲಕದಲ್ಲಿ ಯಾವುದೇ ಖರ್ಚು ವೆಚ್ಚದ ಬಗ್ಗೆ ಮಾಹಿತಿಯೇ ಇಲ್ಲ.

    Share This
    300x250 AD
    300x250 AD
    300x250 AD
    Leaderboard Ad
    Back to top