• first
  second
  third
  Slide
  previous arrow
  next arrow
 • ರಾಜ್ಯದಲ್ಲಿ ಮೊದಲ ದಿನ 4 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ

  300x250 AD

  ಬೆಂಗಳೂರು : ಸೋಮವಾರದಿಂದ ರಾಷ್ಟ್ರದೆಲ್ಲೆಡೆ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದ್ದು, ಮೊದಲ ದಿನವೇ ಕರ್ನಾಟಕದಲ್ಲಿ 4.03 ಲಕ್ಷಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದುಕೊಂಡರು.


  ರಾಜ್ಯದಲ್ಲಿನ ಎಲ್ಲ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊ ವ್ಯಾಕ್ಸೀನ್ ನೀಡಲಾಗುತ್ತಿದ್ದು, ಒಟ್ಟು 4000  ಕೇಂದ್ರದಲ್ಲಿ ಲಸಿಕಾ ವಿತರಣೆ ಮಾಡಲಾಗಿದೆ. 28 ದಿನಗಳ ನಂತರ ಎಲ್ಲ ಮಕ್ಕಳು ಎರಡನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಮೊದಲ ದಿನದಂದು ರಾಷ್ಟ್ರದಲ್ಲಿದೆ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಕೋ ವ್ಯಾಕ್ಸೀನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮಾನ್ಸೂಕ್ ಮಾಂಡವೀಯ  ತಿಳಿಸಿದ್ದಾರೆ.


  ಕೋವಿನ್ ಪೋರ್ಟಲ್ ನಲ್ಲಿ ದೇಶಾದ್ಯಂತ 27 ಲಕ್ಷಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಹೆಚ್ಚಿನವರು ಲಸಿಕೆ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿ ಲಸಿಕೆ ಪಡೆದಿದ್ದಾರೆ.

  300x250 AD


  2007 ಮತ್ತು ಅದಕ್ಕಿಂತ ಮೊದಲು ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದು, 15ರಿಂದ 18 ವರ್ಷದ 7 ರಿಂದ 8 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

  300x250 AD
  300x250 AD
  300x250 AD
  Back to top