ಕಾರವಾರ: ಸಂಸದ ಡಿ.ಕೆ.ಸುರೇಶ್ ಅವರು ರಾಮನಗರದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎದುರಲ್ಲಿ ಶಿಷ್ಠಾಚಾರ ಉಲ್ಲಂಘಿಸಿ ಗೂಂಡಾ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಸುಭಾಷ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸುಭಾಷ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಂಸದಡಿ.ಕೆ. ಸುರೇಶ್ ವಿರುದ್ಧಘೋಷಣೆಕೂಗಿದರು. ಬಳಿಕ ಸುರೇಶ್‍ಅವರ ಭಾವಚಿತ್ರಕ್ಕೆಚಪ್ಪಲಿಯಿಂದ ಹೊಡೆದು, ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭುಕೆಂಪೇಗೌಡರ ಪ್ರತಿಮೆಗಳ ಅನಾವರಣಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಎದುರಲ್ಲೇ ಸಂಸದಡಿ.ಕೆ. ಸುರೇಶಅವರುಗೂಂಡಾ ವರ್ತನೆ ಮಾಡಿದ್ದಾರೆಎಂದು ಸಿಟ್ಟು ಹೊರಹಾಕಿದರು.
ಬಿಜೆಪಿ ಗ್ರಾಮೀಣಘಟಕದಅಧ್ಯಕ್ಷ ಸುಭಾಷ ಗುನಗಿ ಮಾತನಾಡಿ, ರಾಮನರಾಜ್ಯದಲ್ಲಿರಾವಣಆರ್ಭಟ ಸಲ್ಲದು. ಅವರ ವರ್ತನೆಕಾಂಗ್ರೆಸ್ ಪಕ್ಷದ ಸಂಸ್ಕøತಿಯನ್ನು ಬಿಂಬಿಸುತ್ತದೆ. ಕಾಂಗ್ರೆಸ್ ಪಕ್ಷತನ್ನಕಾರ್ಯಕರ್ತರಿಗೆಯಾವರೀತಿ ಶಿಸ್ತು ಕಲಿಸಿದೆ ಎನ್ನುವುದಕ್ಕೆರಾಮನಗರದಘಟನೆ ಸಾಕ್ಷಿಎಂದುಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರ ಮಂಡಲಾಧ್ಯಕ್ಷ ನಾಗೇಶ್‍ಕುರ್ಡೇಕರ್, ನಗರಸಭೆ ಸದಸ್ಯೆ ಮಾಲಾ ಹುಲಸ್ವಾರ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ನಗರಸಭಾಉಪಾಧ್ಯಕ್ಷ ಪಿ.ಪಿ.ನಾಯ್ಕ, ಎಸ್ಸಿ ಮೋರ್ಚಾಅಧ್ಯಕ್ಷಉದಯ ಬಶೆಟ್ಟಿ, ಸುಜಾತಾ ಭಾಂದೇಕರ್, ಶ್ವೇತಾ ಭಟ್ಕಳಕರ್, ಅಶೋಕ ಕಾಮತ್, ಮನೋಜ ಭಟ್ಟ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರಿದ್ದರು.