ಕಾರವಾರ: ಎಂಪ್ಲೋಯಿ ಪ್ರೊವಿಡೆಂಟ್ ಫಂಡ್‍ಆರ್ಗ್‍ನೈಜೇಶನ್ (ಇಪಿಎಫ್‍ಒ) ಆಧಾರ ಇ-ನಾಮ ನಿರ್ದೇಶನವನ್ನು ಪ್ರಾರಂಭಿಸಿದ್ದು ಇಪಿಎಫ್‍ಒ ಸದಸ್ಯರು ಹಠಾತ್ ಮರಣ ಹೊಂದಿದಲ್ಲಿ ಉಳಿದಿರುವ ಕುಟುಂಬದ ಸದಸ್ಯರು ಆಯಾ ಖಾತೆಗಳಲ್ಲಿ ನಾಮನಿರ್ದೇಶನವನ್ನು ಸಲ್ಲಿಸದೇ ಇರುವವರು ಇಂಟರ್ಫೆಸನ ಯುನಿಫೈಡ್ ಪೊರ್ಟಲ್‍ನಲ್ಲಿ ಆಧಾರ ಇ-ನಾಮ ನಿರ್ದೇಶನ ಸೌಲಭ್ಯವನ್ನು ಬಳಸಿಕೊಂಡು ಸದಸ್ಯರು ಆನ್‍ಲೈನ್ ವೆಬ್‍ಸೈಟ್ URL:https://unifiedportalmem.epfindia.gov.in/memberinterface/ ನಲ್ಲಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಬಹುದು.
ಇಪಿಎಫ್ ಸದಸ್ಯರುತಮ್ಮ ಮೊಬೈಲ್ ಸಂಖ್ಯೆಯು ಯುಎಎನ್ ನೊಂದಿಗೆ ಲಿಂಕ್ ಆಗಿದ್ದರೆ ಮತ್ತು ಆಧಾರ ಪರಿಶೀಲನೆಯು ಪೂರ್ಣಗೊಂಡಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು. ಲಭ್ಯವಿರುವ ಇ-ನಾಮನಿರ್ದೇಶನವು ಸದಸ್ಯರು, ಫಲಾನುಭವಿಗಳಿಗೆ ಆನ್ ಲೈನ್ ಪಿಂಚಣಿ ಕ್ಲೈಮ್‍ನ್ನು ಸುಲಭವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಮತ್ತು ಸದಸ್ಯರು ನಿಧನದ ನಂತರ ಅವನ,ಅವಳ ನಾಮಿನಿಯು ಅವನ, ಅವಳ ಆಧಾರ ಲಿಂಕ್‍ಆಗಿರುವ ಮೊಬೈಲಿನ ಓಟಿಪಿ ಆಧಾರದ ಮೇಲೆ ಆನ್‍ಲೈನ್‍ಕ್ಲೈಮ್‍ನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
ಎಲ್ಲಾ ಇಪಿಎಫ್ ಸದಸ್ಯರು ತಮ್ಮ ಯುಎಎನ್‍ಗೆ ಆಧಾರ ಮತ್ತು ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡುವುದರಿಂದ ಅವರು ಇಪಿಎಫಒ ನಿಂದ ಆನ್‍ಲೈನ್ ಸೇವೆಗಳನ್ನು ಪಡೆಯಬಹುದು ಎಂದು ಹುಬ್ಬಳ್ಳಿ ಪ್ರಾದೇಶಿಕ ಕಛೇರಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಿಹಿರಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.