
ಶಿರಸಿ: ಕಳೆದ 2020 ಸಪ್ಟೆಂಬರ ತಿಂಗಳಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಬಿ.ಕಾಂ. ಅಂತಿಮ ವರ್ಷದ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಮೊಡರ್ನ್ ಎಜ್ಯುಕೇಶನ್ ಸೊಸೈಟಿಯ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯಕ್ಕೆ ಎರಡು ರ‍್ಯಾಂಕಗಳು ದೊರೆಯುವದರೊಂದಿಗೆ ಕಾಲೇಜಿನ ಕೀರ್ತಿ ಇನ್ನಷ್ಟು ಹೆಚ್ಚಿದೆ.
ಕುಮಾರ ಮಧು ಗಜಾನನ ಹೆಗಡೆ ಶೇಕಡಾ 94.92 ಅಂಕಗಳನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಐದನೇಯ ರ‍್ಯಾಂಕ್, ಕುಮಾರಿ ಶ್ರುತಿ ದಿವಸ್ಪತಿ ಹೆಗಡೆ ಶೇಕಡಾ 94.54 ಅಂಕಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಎಂಟನೇ ರ‍್ಯಾಂಕ್ ಪಡೆದಿದ್ದಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.