ಕಾರವಾರ: 2021-2022ನೇ ಸಾಲಿನ ದೀನದಯಾಳ ಅಂತ್ಯೋದಯ (ಡೇ- ನಲ್ಮ್) ಯೋಜನೆಯಡಿ ಸ್ವಂತಕಟ್ಟಡ, ಮಳಿಗೆ ಹೊಂದಿರದ, ಪಾದಚಾರಿಗಳಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಹಾಗೂ ಅರಿವಿನ ಕೊರತೆಯಿಂದಾಗಿ ಸಮೀಕ್ಷೆಯಿಂದ ಹೊರಗುಳಿದಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಜ. 5ರಿಂದ 12ರವರೆಗೆ ನಡೆಸಲಾಗುತ್ತಿದೆ.
ಅರ್ಹ ಬೀದಿ ಬದಿ ವ್ಯಾಪಾರಿಗಳು ನಗರಸಭೆ ಕಛೇರಿಯಿಂದ ನಿಗದಿತ ಅರ್ಜಿ ಪಡೆದು ಸಂಬಂಧಿಸಿದ ದಾಖಲೆಗಳಾದ ಕುಟುಂಬ ಸದಸ್ಯರಗ್ರೂಪ್ (ಪಾಸ್‍ಪೋರ್ಟ ಸೈಜ್) ಪೋಟೋ-2, ವ್ಯಾಪಾರ/ಉದ್ಯೋಗ ಮಾಡುತ್ತಿರುವ ಸ್ಥಳದ ಪೋಟೋ-1, ಪಾಸ್ ಪೋರ್ಟ ಸೈಜ್ ಪೋಟೋ-3, ಆಧಾರಕಾರ್ಡ, ರೇಶನ್‍ಕಾರ್ಡ, ಚುನಾವಣಾಗುರುತಿನಚೀಟಿ, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಬುಕ್‌ಝರಾಕ್ಸ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ವಿಭಾಗದ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದುಎಂದುಕಾರವಾರ ನಗರಸಭೆ ಪೌರಾಯುಕ್ತಆರ್ ಪಿ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.