• Slide
  Slide
  Slide
  previous arrow
  next arrow
 • ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆ ಫಲಿತಾಂಶ ಪ್ರಕಟ

  300x250 AD

  ಶಿರಸಿ: ತಾಲೂಕು ಹುಲೇಕಲ್ಲಿನ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈ ಸಾಲಿನಲ್ಲಿ ನಡೆಸಿದ ಅಂತರ ಕಾಲೇಜು ಕವನ ರಚನಾ ಸ್ಪರ್ಧೆಯ ಫಲಿತಾಂಶ ಅಂತಿಮವಾಗಿದ್ದು, ಸ್ಫರ್ಧೆ ಫಲಿತಾಂಶ ಹೊರಬಿದ್ದಿದೆ.


  ಕಳೆದ ಒಂಬತ್ತು ವರ್ಷಗಳಿಂದ ಸಕ್ರಿಯವಾಗಿರುವ ಅಂಕುರ ಸಾಹಿತ್ಯ ವೇದಿಕೆಯ ಅಡಿಯಲ್ಲಿ ಪ್ರಸಕ್ತ ವರ್ಷ ರಾಜ್ಯ ಮಟ್ಟದ ಅಂತರ ಕಾಲೇಜು ಕವನ ರಚನಾ ಸ್ಪರ್ಧೆಯನ್ನು ನಡೆಸಲಾಗಿತ್ತು. ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳನ್ನು ಒಳಗೊಂಡು ರಾಜ್ಯದ ವಿವಿಧ ಕಾಲೇಜುಗಳಿಂದ 102 ಯುವಕವಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಗೆ ಒಟ್ಟೂ 150 ರಷ್ಟು ಕವನಗಳು ಬಂದಿರುವುದು ಒಂದು ಆಶಾದಾಯಕ ಬೆಳವಣಿಗೆ.


  ಹೊಸ ತಲೆಮಾರಿನ ಕವಿಗಳಾದ ಪಾಲ್ಗುಣ ಗೌಡ, ಅಚವೆ. ಪ್ರಾಚಾರ್ಯರು, ಪಿ ಎಂ ಜ್ಯೂನಿಯರ್ ಕಾಲೇಜು, ಅಂಕೋಲಾ ಹಾಗೂ ಹೊನ್ನಾವರದ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ನಾಗರಾಜ ಹೆಗಡೆ, ಅಪಗಾಲ ಇವರು ಈ ಸ್ಪರ್ಧೆಯ ನಿರ್ಣಾಯಕರಾಗಿ ಸಹಕಾರ ನೀಡಿದರು. ಸ್ಪರ್ಧೆಗೆ ಬಂದ ಕವನಗಳಲ್ಲಿ ಬಹುಮಾನಕ್ಕೆ ಸಮಾನ ಸ್ಥಾನವೆಂದು ಪರಿಗಣಿಸಿ ಉತ್ತಮ ಎನಿಸಿದ ಹತ್ತು ಕವನಗಳನ್ನು ಆಯ್ಕೆ ಮಾಡಲಾಗಿದೆ.

  300x250 AD


  ಬಹುಮಾನಿತರ ಯಾದಿ ಹೀಗಿದೆ: ಎ. ಮನ್ವಿತ, ಶ್ರೀರಾಮ ಪಿಯು ಕಾಲೇಜು, ಕಲ್ಲಡ್ಕ, ಚೈತನ್ಯ ಎಂ ಎಸ್, ಮಹೇಶ ಪಿಯು ಕಾಲೇಜು, ಧಾರವಾಡ, ಕವಿತಾ ಬೋಳಗುಡ್ಡೆ, ಸಪಪೂ ಕಾಲೇಜು, ಯಲ್ಲಾಪುರ, ಕಾವ್ಯಾ ದೇವು ಮರಾಠಿ, ಸಪಪೂ ಕಾಲೇಜು, ನೀಲೇಕಣಿ, ಶಿರಸಿ, ನಯನಾ ಗೌಡ, ಶ್ರೀದೇವಿ ಪಿಯು ಕಾಲೇಜು, ಹುಲೇಕಲ್, ಭಾಗ್ಯಲಕ್ಷ್ಮಿ ಹೆಗಡೆ, ಶ್ರೀದೇವಿ ಪಿಯು ಕಾಲೇಜು, ಹುಲೇಕಲ್, ಬಸಂತ್ ಡಿ, ಕೊಟ್ಟೂರೇಶ್ವರ ಪಿಯು ಕಾಲೇಜು, ಕೊಟ್ಟೂರು, ವಿಜಯನಗರ, ವೈಶಾಲಿ ಎನ್, ಸಪಪೂ ಕಾಲೇಜು, ಉಪ್ಪರಿಗೇನಹಳ್ಳಿ, ಹೊಳಲ್ಕೆರೆ, ಚಿತ್ರದುರ್ಗ, ಚಂದನ ಕೆ, ರಾಘವೇಂದ್ರ ಹೈಟೆಕ್ ಪಿಯು ಕಾಲೇಜು, ದಾವಣಗೆರೆ, ಮಹಾಲಕ್ಷ್ಮಿ ಹೆಗಡೆ, ಶ್ರೀದೇವಿ ಪಿಯು ಕಾಲೇಜು, ಹುಲೇಕಲ್ ಇವರು ಪಡೆದುಕೊಂಡಿದ್ದಾರೆ.

  ಹೀಗೆ ವಿವಿಧ ಕಾಲೇಜುಗಳ ಹತ್ತು ವಿದ್ಯಾರ್ಥಿಗಳ ಕವನಗಳು ಬಹುಮಾನಕ್ಕೆ ಆಯ್ಕೆಯಾಗಿವೆ. ಇಲ್ಲಿನ ಕವನಗಳು ಕಾವ್ಯದ ವಸ್ತು, ಆಶಯ, ಪ್ರತಿಮೆ, ಬಂಧ ಮೊದಲಾಗಿ ತಮ್ಮದೇ ನೆಲೆಗಳಲ್ಲಿ ಭಿನ್ನವಾಗಿ ಮೂಡಿಬಂದಿದ್ದು ಎಲ್ಲವನ್ನು ಸಮಾನವಾಗಿ ಪರಿಗಣಿಸಲಾಗಿದೆ. ವಿಜೇತರು ಹಾಗೂ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಕವನ ಸಂಕಲನದ ಪ್ರತಿಯನ್ನು ನೀಡಲಾಗುತ್ತದೆ ಎಂದು ಅಂಕುರ ಸಾಹಿತ್ಯ ವೇದಿಕೆಯ ಸಂಚಾಲಕ ಉಪನ್ಯಾಸಕ ಮೋಹನ ಭರಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top