ಕಾರವಾರ: ಕರ್ನಾಟಕ ಸಾಹಿತ್ಯ ಅಕಡೆಮಿಯ ವತಿಯಿಂದ ಜ.21 ರಿಂದ 22ರ ವರೆಗೆ ಡಾ. ಸಿದ್ದಲಿಂಗಯ್ಯನವರ ಬದುಕು- ಬರಹ ಎಂಬ ವಿಚಾರ ಸಂಕಿರ್ಣ ಹಮ್ಮಿಕೊಂಡಿದ್ದು.
ವಿಚಾರ ಸಂಕಿರಣ ಪರ್ಯಾಯ ಗೋಷ್ಟಿಯಲ್ಲಿ ಡಾ. ಸಿದ್ದಲಿಂಗಯ್ಯ ಬದುಕು- ಬರಹ ಕುರಿತಾಗಿ ಪ್ರಬಂಧ ಮಂಡಿಸುವವರು ಜ.12 ರೊಳಗಾಗಿ ಅರ್ಜಿಯೊಂದಿಗೆ ಪ್ರಬಂಧವನ್ನು ಅಕಾಡೆಮಿ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ವೆಬ್‍ಸೈಟ್ http://sahityaacademy.karnataka.gov.in ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಕರಿಯಪ್ಪಾ. ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.