
ಶಿರಸಿ: ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜು ಹಾಗೂ ಹಾಗೂ ತಾಲೂಕ ಆಸ್ಪತ್ರೆ ಯಲ್ಲಾಪುರ ಇವರ ಸಹಯೋಗದಲ್ಲಿ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಕಾಲೇಜು ಆವರಣದಲ್ಲಿ ಮಂಗಳವಾರ ಕೋವಿಡ್-19 ಲಸಿಕೆ ಅಭಿಯಾನ ನಡೆಯಿತು. ಸಂಸ್ಥೆಯ ಅಧ್ಯಕ್ಷ ಟಿ.ವಿ ಹೆಗಡೆ, ಎಲ್.ಜಿ ಹೆಗಡೆ, ಪ್ರಾಚಾರ್ಯೆ ಶರಾವತಿ ಭಟ್ಟ, ವೈದ್ಯಾಧಿಕಾರಿ ಡಾ.ಸುಷ್ಮಾ, ಸೂರ್ಯನಾರಾಯಣ ಭಟ್ಟ, ಪ್ರವೀಣ ಇನಾಮ್ದಾರ್ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನೂರಕ್ಕೂ ಹೆಚ್ಚು ಜನ ಲಸಿಕೆಯನ್ನು ಪಡೆದುಕೊಂಡರು.