ಶಿರಸಿ: ಪಟ್ಟಣದ ನೀಲೇಕಣಿ ಬಳಿಯಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ವಾಹನ ಚಾಲಕನ ಅಚಾತುರ್ಯದಿಂದ ಕಾರ್ ಪೆಟ್ರೊಲ್ ಹಾಕುವ ವ್ಯಕ್ತಿಗೆ ಬಡಿದು ತೀವ್ರ ಗಾಯಗಳಾಗಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ.
ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ವ್ಯಾಗನಾರ್ ಕಾರ್ ಚಾಲಕ, ವಾಹನ ಚಾಲೂ ಮಾಡಿ, ಚಲಿಸುವಾಗ ಚಾಲಕ ಗೊಂದಲಕ್ಕೊಳಗಾಗಿ ಎದುರಿಗಿರುವ ವ್ಯಕ್ತಿಯನ್ನು ಬೈಕ್ ಸಮೇತ ದೂಡಿಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಇನ್ನೋರ್ವನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ ಎನ್ನಲಾಗಿದೆ.
ಈ ಮೊದಲು ಆಟೋ ಗೇರ್ ವಾಹನ ಚಲಾಯಿಸುತ್ತಿದ್ದ ಚಾಲಕ, ಪ್ರಸ್ತುತ ಗೇರ್ ಇರುವ ವಾಹನ ಚಲಾಯಿಸಿದ್ದು, ಗೊಂದಲಕ್ಕೆ ಕಾರಣವಾಗಿದೆ ಎಂಬ ಮಾಹಿತಿ ದೊರೆತಿದೆ.