ಶಿರಸಿ: ಧಾರವಾಡ ಸಹಕಾರಿ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ 2020-2021 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಲ್ಯಾಣ ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಚೆಕ್’ನ್ನು ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕರ ವಿ ಮುಗದ್ ಅವರು ವಿತರಿಸಿದರು.
ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಲ್ಯಾಣ ಸಂಘದ ಸದಸ್ಯರುಗಳ ಮಕ್ಕಳಿಗೆ ನೀಡಲಾಗುವ ಚೆಕ್ ವಿತರಣಾ ಕಾರ್ಯಕ್ರಮವನ್ನು ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ಜ.3 ರ ಮಂಗಳವಾರದಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರನ್ನು ಜಿಲ್ಲೆಯನಿರ್ದೇಶಕರುಗಳು ಆತ್ಮೀಯವಾಗಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಧಾರವಾಡ ಸಹಕಾರಿ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೆ ಹೆಗಡೆ ಸಭೆಯ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಲ್ಯಾಣ ಸಂಘದಿಂದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿಮೊದಲನೇಯದಾಗಿ ಹಾಲು ಉತ್ಪಾದಕರ ಮತ್ತು ನೌಕರರ ಮಕ್ಕಳಿಗಾಗಿ ವಿದ್ಯಾರ್ಥಿನಿಲಯವನ್ನು ಒಕ್ಕೂಟದ ಜಾಗದಲ್ಲಿ ನಿರ್ಮಾಣ ಮಾಡಲು ಈಗಾಗಲೇ ತೀರ್ಮಾನಿಸಲಾಗಿದ್ದು, ಹಾಗೂ ಹಾಲು ಉತ್ಪಾದಕರು ಮತ್ತು ನೌಕರರ ಮಕ್ಕಳ ಕಲ್ಯಾಣ ಕಾರ್ಯಕ್ಕಾಗಿ ಕಲ್ಯಾಣ ಮಂಟಪವನ್ನು ಕೂಡ ಒಕ್ಕೂಟದ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು. ಅಲ್ಲದೇ ಶೇ. 50ರಷ್ಟು ಅನುದಾನದ ಅಡಿಯಲ್ಲಿ ಕಲ್ಯಾಣ ಸಂಘದಿಂದ ಕಲ್ಯಾಣ ಸಂಘದ ಸದಸ್ಯತ್ವ ಹೊಂದಿದ ಹಾಲು ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಮತ್ತು ಹುಲ್ಲು ಕತ್ತರಿಸುವ ಯಂತ್ರಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೈನೋದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿದ್ದು, ಅದಕ್ಕಾಗಿ ಜಿಲ್ಲೆಯ ಜನರು ಹೈನೋದ್ಯಮದಿಂದ ವಿಮುಖರಾಗದಂತೆ ಅವರು ವಿನಂತಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಕೆ.ಎಂ.ಎಫ್.ನಲ್ಲಿನ 14 ಒಕ್ಕೂಟದಲ್ಲಿ ಬಹುತೇಕ ಒಕ್ಕೂಟಗಳು ಹಾಲಿನ ದರದಲ್ಲಿ ಕಡಿತಗೊಳಿಸಿದ್ದು, ಆದರೆ ನಮ್ಮ ಧಾರವಾಡ ಹಾಲು ಒಕ್ಕೂಟವು ಹಾಲಿನ ದರದಲ್ಲಿ ಯಾವುದೇ ಕಡಿತಗೊಳಿಸದೇ ರೈತರ ಹಿತದೃಷ್ಠಿಯಿಂದ ಹಾಲಿನ ದರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬರಲಾಗಿದೆ ಅಲ್ಲದೇ ಇದೇ ತಿಂಗಳ 1ನೇ ತಾರೀಖಿನಿಂದ ಪ್ರತೀ ಲೀಟರ್ ಆಕಳ ಹಾಲಿಗೆ 0.50 ಪೈಸೆ ಹಾಗೂ ಪ್ರತೀ ಲೀಟರ್ ಎಮ್ಮೆಯ ಹಾಲಿಗೆ ಈ ಮೊದಲು ರೂ. 33.25 ನೀಡಲಾಗುತ್ತಿದ್ದನ್ನು ಎಮ್ಮೆಯ ಹಾಲಿಗೆ ಅತೀಯಾದ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಪ್ರತೀ ಲೀಟರ್ ಎಮ್ಮೆಯ ಹಾಲಿಗೆ ರೂ. 38.00 ಕ್ಕೆ ಹೆಚ್ಚಿಸಲಾಗಿದೆ ಎಂದರು. ಅದರಂತೆಯೇ ಈ ಭಾಗದ ಹಾಲು ಉತ್ಪಾದಕರ ಹಲವು ದಿನದ ಬೇಡಿಕೆಯಂತೆಪಶು ಆಹಾರದದರದಲ್ಲಿ ಕಡಿಮೆ ಮಾಡಬೇಕೆಂದು ಕೇಳಿಕೊಂಡ ಹಿನ್ನಲೆಯಲ್ಲಿ ಇದೇ ತಿಂಗಳ1ನೇ ತಾರೀಖಿನಿಂದ ನಂದಿನಿ ಗೋಲ್ಡ್ ಮತ್ತು ನಂದಿನಿ ಬೈಪಾಸ್ ಪಶು ಆಹಾರದ ಬೆಲೆಯನ್ನು ಚೀಲಕ್ಕೆ ತಲಾ ರೂ. 26 ರಂತೆ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದರು. ಪಿ.ಪಿ.ಪಿ. ಯೋಜನೆಯ ಅಡಿಯಲ್ಲಿ ಶಿರಸಿಯ ಹನುಮಂತಿಯಲ್ಲಿ ಪ್ಯಾಕಿಂಗ್ ಘಟಕವನ್ನುಪ್ರಾರಂಭ ಮಾಡುತ್ತಿರುವುದರಿಂದ ಸದ್ಯ ಇರುವ ಜಿಲ್ಲೆಯ ಉತ್ಪಾದನೆಗಿಂತ ಇನ್ನೂ ಸುಮಾರು 10ರಿಂದ 15 ಸಾವಿರದಷ್ಟು ಹಾಲಿನ ಶೇಖರಣೆ ಅವಶ್ಯಕತೆಯಿದ್ದು, ಜಿಲ್ಲೆಯ ಹಾಲು ಉತ್ಪದಕರು ಇನ್ನೂ ಹೆಚ್ಚಿನ ಹಾಲನ್ನು ಪೂರೈಸುವಲ್ಲಿ ಕಾರ್ಯಪ್ರರ್ತಕರಾಗಬೇಕೆಂದು ಸಭೆಯ ಮೂಲಕ ಅವರು ಕರೆ ನೀಡಿದರು.
2020-2021 ನೇಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಲ್ಯಾಣ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್’ನ್ನು ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೆ ಹೆಗಡೆ ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶಂಕರ ಪಿ ಹೆಗಡೆ, ಪರಶುರಾಮವಿ ನಾಯ್ಕ ಇವರುಗಳು ವಿತರಿಸಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶಂಕರ ಪಿ ಹೆಗಡೆ, ಪರಶುರಾಮ ವಿ ನಾಯ್ಕ ಇವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದಯಾನಂದ ಎ ಎನ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ಅಧಿಕಾರಿಗಳಾದ ಬಸವರಾಜ ಸಲೋನಿ, ಪಶು ವೈದ್ಯಾಧಿಕಾರಿಗಳಾದ ಡಾ. ರಾಕೇಶ ತಲ್ಲೂರ್, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ, ಚಂದನ ನಾಯ್ಕ, ಜಯಂತ ಪಟಗಾರ, ನಿಖಿಲ್ ನಾಯ್ಕ, ಪ್ರವೀಣ ಬಳ್ಳಾರಿ ಹಾಗೂ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯ ನಿರ್ವಾಹಕರುಗಳು, ವಿದ್ಯಾರ್ಥಿ ವೇತನದ ಚೆಕ್ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಉಪಸ್ಥಿತರಿದ್ದರು.