ಸಿದ್ದಾಪುರ: ಇಲ್ಲಿನ ಮಾವಿನ ಗುಂಡಿಯಲ್ಲಿ ಲಾರಿ-ಕಾರ್ ನಡುವೆ ರಸ್ತೆ ಅಪಘಾತವಾಗಿದ್ದು, ಕಾರ್ ಚಾಲಕನ ಜೊತೆಯಿದ್ದ ಸಹ ಸವಾರನಿಗೆ ಕೂಡಾ ಗಂಭೀರ ಗಾಯಗಳಾಗಿದೆ.
ಸಾಗರ ಕಡೆಯಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕಾರಿಗೆ ಹೊನ್ನಾವರ ಕಡೆಯಿಂದ ಸಾಗರ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಹಾರುನ್ ಹಾಗೂ ಮುಬಾರಕ್ ಗೇರುಸೊಪ್ಪ ಇವರುಗಳಿಗೆ ಗಾಯವಾಗಿದೆ. ಘಟನೆಗೆ ಲಾರಿ ಚಾಲಕನ ಅತಿವೇಗ ಮತ್ತು ನಿಷ್ಕಾಳಜಿತನ ಕಾರಣ ಎನ್ನಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.