• Slide
  Slide
  Slide
  previous arrow
  next arrow
 • ಅಂಕೋಲಾದಲ್ಲಿ ಮಕ್ಕಳ ಕೋವಿಡ್ ಲಸಿಕಾಭಿಯಾನಕ್ಕೆ ಚಾಲನೆ

  300x250 AD


  ಅಂಕೋಲಾ: 15 ರಿಂದ 18 ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಚಾಲನೆ ನೀಡಿದರು. ತಾಲೂಕಿನ ಕೇಣಿಯ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆದು ಲಸಿಕಾ ಅಭಿಯಾನವನ್ನು ಉದ್ಘಾಟಿಸಿದರು.


  ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ ಮಹಾಮಾರಿಗೆ ಯಾರೂ ಹೆದರುವ ಅವಶ್ಯಕತೆಯಿಲ್ಲ. ಧೈರ್ಯವೇ ಪ್ರಧಾನ ಇದು ನನ್ನ ಅನುಭವ ಕೂಡ, ನಮ್ಮನ್ನು ನಾವು ರಕ್ಷಿಸಿಕೊಳ್ಳುವದಕ್ಕಾಗಿ ಮಾಸ್ಕ ಧರಿಸುವದು, ಸಾಮಾಜಿಕ ಅಂತರ ಕಾಪಾಡುವದು ಮುಂತಾದ ಮುಂಜಾಗೃತೆಯನ್ನು ವಹಿಸಬೇಕು. ಲಸಿಕೆ ಪಡೆಯುವದರಿಂದ ಮುಂದೆ ಆಗುವ ಅಪಾಯವನ್ನು ತಡೆಯಬಹುದು. ಮಕ್ಕಳು ಲಸಿಕೆ ಪಡೆಯಲು ಧೈರ್ಯ ಮಾಡಿದ್ದು ನೋಡಿ ಲಸಿಕೆ ಪಡೆಯದ ಹಿರಿಯರೂ ಪ್ರೇರಿತರಾಗಿ ಮುಂದೆ ಬರಬೇಕು ಎಂದರು.


  ತಾಲೂಕ ದಂಡಾಧಿಕಾರಿ ಉದಯ ಕುಂಬಾರ ಮಾತನಾಡಿ ಕೊರೋನ ದೂರವಾಗಿದೆ ಎಂದು ತಿಳಿದರೆ ಅದು ತಪ್ಪು ಕಲ್ಪನೆ. ಕೊರೋನ ರೂಪಾಂತರಗೊಂಡು ಬೇರೆ ಬೇರೆ ಅಲೆಯ ರೂಪದಲ್ಲಿ ಬರಬಹುದು. ಹಿಂದೆ ಕೊರೋನದಿಂದ ಸಾಕಷ್ಟು ಅಪಾಯವಾಗಿದೆ ಹಾಗಾಗದಂತೆ ಪ್ರತಿಯೊಬ್ಬರೂ ಸದಾಕಾಲ ಜಾಗ್ರತರಾಗಿರಬೇಕು. ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ತಾಲೂಕಾಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

  300x250 AD


  ತಾಲೂಕಾ ಆರೋಗ್ಯಾಧಿಕಾರಿ ಡಾ.ನಿತಿನ ಹೊಸ್ಮಲಕರ ಪ್ರಾಸ್ತಾವಿಕ ಮಾತನಾಡಿ ಆರೋಗ್ಯ ಇಲಾಖೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದ್ದು ಮೂರನೇ ಅಲೆಗೆ ಆತಂಕ ಪಡಬೇಕಾಗಿಲ್ಲ ಹಾಗೆಯೇ ಮಕ್ಕಳು ಲಸಿಕೆ ಪಡೆಯಲು ಯಾವುದೇ ಆತಂಕ ಪಡಬೇಕಾಗಿಲ್ಲ ಕೋವ್ಯಾಕ್ಸಿನ್ ಲಸಿಕೆ ಸುರಕ್ಷಿತವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧೃಢಪಟ್ಟಿದೆ. ಲಸಿಕೆ ಪಡೆಯುವ ಮಕ್ಕಳಿಗೆ ಎಲ್ಲ ರೀತಿಯ ಮುಂಜಾಗೃತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಾಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಬೆಡ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳ ಆರೋಗ್ಯದ ದೃಷ್ಠಿಯಿಂದ ಲಸಿಕಾಅಭಿಯಾನ ಪ್ರಾರಂಭಿಸಿದ್ದು ಇದನ್ನು ಯಶಸ್ವಿಗೊಳಿಸಬೇಕೆಂದರು.


  ವೇದಿಕೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ, ಕ್ಷೇತ್ರ ಶಿಕ್ಷಣಾಧಿಕಾರಿ ಹರ್ಷಿತಾ ನಾಯಕ, ಪುರಸಭೆಯ ಉಪಾಧ್ಯಕ್ಷೆ ರೇಖಾ ಗಾಂವಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ, ಡಿವೈಪಿಸಿ ಲತಾ ನಾಯ್ಕ, ಮುಖ್ಯ ಶಿಕ್ಷಕ ಚಂದ್ರಕಾಂತ.ಜಿ.ಗಾಂವಕರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಾರಾನಾಥ ಗಾಂವಕರ, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹರ್ಷಿತಾ ನಾಯಕ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
  ಶಿಕ್ಷಕ ರಮಾನಂದ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ಸಿ.ಜಿ.ಗಾಂವಕರ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top