ಭಟ್ಕಳ: ನಗರದಿಂದ ಬಂದರಿನ ಕಡೆಗೆ ಬೈಕ್ ಸವಾರ ಸಾಗುತ್ತಿದ್ದಾಗ ರಸ್ತೆಗೆ ಮಧ್ಯವಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು, ಮೂವರು ಗಾಯಗೊಂಡ ಘಟನೆ ಇಲ್ಲಿಯ ಬೆಳ್ನಿಯ ಮುಖ್ಯ ರಸ್ತೆಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡರನ್ನು ಬೈಕ ಸವಾರ ಮಂಜುನಾಥಗೊಂಡ (31) ಹಿಂಬದಿ ಸವಾರರಾದ ದುರ್ಗಿಗೊಂಡ,(50) ಹಾಗೂ ಅಕಿಲ್ಗೊಂಡ,(6) ಎಂದು ಗುರುತಿಸಲಾಗಿದೆ. ಇವರು ಬೈಕಿನಲ್ಲಿ ತಲಗೋಡಿಗೆ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ನಾಯಿ ಅಡ್ಡ ಬಂದಾಗ ಬೈಕ ನಿಯಂತ್ರಣ ತಪ್ಪಿರಸ್ತೆ ಕಳೆಗೆ ಬಿದ್ದು ಮೂವರು ಗಂಭೀರಗಾಯಗೊಂಡು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ಗಾಯಾಳುಗಳನ್ನು ಕೊಂಡೊಯ್ಯಲಾಗಿದೆ, ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.