• Slide
    Slide
    Slide
    previous arrow
    next arrow
  • ಗ್ರಾಮಾಭಿವೃದ್ಧಿಗೆ ಸದಾ ಸಿದ್ಧಳಾಗಿದ್ದೇನೆ; :ಶಾಸಕಿ ರೂಪಾಲಿ

    300x250 AD

    ಕಾರವಾರ: ಗ್ರಾಮದ ಜನರ ಸೇವೆಗೆ ನಾನು ಸದಾ ಬದ್ಧಳಾಗಿರುತ್ತೇನೆ. ಯುವ ಜನರು ನಗರದತ್ತ ಮುಖ ಮಾಡಿದ್ದಾರೆ. ಅವರ ಚಿತ್ತವನ್ನು ಗ್ರಾಮಗಳ ಕಡೆ ತಿರುಗುವಂತೆ, ಮಾಡಿ ಗ್ರಾಮಾಭಿವೃದ್ಧಿ ಮಾಡಬೇಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.


    ಕಾರವಾರ ತಾಲೂಕಿನ ಅಸ್ನೋಟಿ, ಹಣಕೋಣ, ಘಾಡಸಾಯಿ ಹಾಗೂ ಚೆಂಡಿಯಾ ಗ್ರಾಮಗಳಲ್ಲಿ ವಿವಿಧರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಅಸ್ನೋಟಿ ಗ್ರಾಮ ಪಂಚಾಯತಿ ಹೊಸಾಳಿ ಮಾರಿಂಗಣಿ ತೊರ್ಲೆಬಾಗ್ ರಸ್ತೆ ನಿರ್ಮಾಣ ಅಂದಾಜು ಮೊತ್ತ 60 ಲಕ್ಷರೂ.ಕಾಮಗಾರಿ, ಅಸ್ನೋಟಿ ಗ್ರಾಮ ಪಂಚಾಯತಿ ಅರವಾದಿಂದ ಪಂಟಲಬಾಗ್‍ರಸ್ತೆ ಅಂದಾಜು ಮೊತ್ತ 60 ಲಕ್ಷರೂ. ನಿರ್ಮಾಣಕಾಮಗಾರಿ, ಅಸ್ನೋಟಿ ಮುಖ್ಯರಸ್ತೆಯಿಂದಕಾಮಾಕ್ಷಿದೇವಸ್ಥಾನಕ್ಕೆ ಹೋಗುವ ರಸ್ತೆಅಂದಾಜು ಮೊತ್ತ 55 ಲಕ್ಷರೂ. ರಸ್ತೆ ನಿರ್ಮಾಣಕಾಮಗಾರಿ, ಹಣಕೋಣಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಟೆಗಾಳಿ ಬಂದರರಸ್ತೆ ಅಂದಾಜು ಮೊತ್ತ 125 ಲಕ್ಷರೂ. ನಿರ್ಮಾಣಕಾಮಗಾರಿ, ಹಣಕೋಣಗ್ರಾಮ ಪಂಚಾಯತ್ ಸಾತೇರಿದೇವಸ್ಥಾನ ರಸ್ತೆ ಅಂದಾಜು ಮೊತ್ತ 150 ಲಕ್ಷರೂ. ರಸ್ತೆ ನಿರ್ಮಾಣಕಾಮಗಾರಿ, ಹಣಕೋಣ ಸಕಲವಾಡರಸ್ತೆ ಅಂದಾಜು ಮೊತ್ತ 55 ಲಕ್ಷರೂ. ನಿರ್ಮಾಣಕಾಮಗಾರಿ, ಘಾಡಸಾಯಿಗ್ರಾಮ ಪಂಚಾಯತಿಯ ಹಳಗೆ ಜೂಗ ರಸ್ತೆಯ ಅಂದಾಜು ಮೊತ್ತ 55 ಲಕ್ಷರೂ. ನಿರ್ಮಾಣಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಘಾಡಸಾಯಿ ಪರತಾಳೆ ರಸ್ತೆಯಅಂದಾಜು ಮೊತ್ತ 55 ಲಕ್ಷರೂ. ನಿರ್ಮಾಣಕಾಮಗಾರಿ, ಘಾಡಸಾಯಿಗ್ರಾಮ ಪಂಚಾಯತಿ ವ್ಯಾಪ್ತಿಯಅಂಬ್ರಾಯಿ ಉಳಗಾ ಕಾತ್ನೆಡೋಲ್‍ರಸ್ತೆಅಂದಾಜು ಮೊತ್ತ 200ಲಕ್ಷರೂ. ಕಾಮಗಾರಿ, ಚೆಂಡಿಯಾಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಂಡಿಯಾ ರಸ್ತೆ ಅಂದಾಜು ಮೊತ್ತ 80 ಲಕ್ಷರೂ. ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

    300x250 AD


    ನಮ್ಮಲ್ಲಿಯ ಯುವಜನತೆ ಉದ್ಯೋಗಕ್ಕಾಗಿ ಬೇರೆ ಬೇರೆಕಡೆ ವಲಸೆ ಹೋಗುತ್ತಾರೆ. ಇದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹೀಗಾಗಿ ಹಿರಿಯರು ಸಂಚಾರಕ್ಕೂತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ಗ್ರಾಮಗಳು ರಸ್ತೆಯಿಂದ ವಂಚಿತವಾಗಿದ್ದವು. ತಮ್ಮ ಅವಧಿಯಲ್ಲಿ ಹಲವೆಡೆ ಮೊದಲ ಬಾರಿ ರಸ್ತೆಯನ್ನು ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ರೂಪಾಲಿ ನಾಯ್ಕ ಹೇಳಿದರು.


    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯಗಣಪತಿ ಉಳ್ವೇಕರ, ಭಾರತೀಯಜನತಾ ಪಕ್ಷಕಾರವಾರಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ,ಗ್ರಾಮ ಪಂಚಾಯಿತಿಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top