
ಯಲ್ಲಾಪುರ: ಕುಂದರಗಿ ಗ್ರಾಮ ಪಂಚಾಯತದ ಕುಂದರಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಭಾ.ಜ.ಪ ಸಂಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮ ದಿನದ ನಿಮಿತ್ತ, ವೃಕ್ಷಾರೋಹಣ ಕಾರ್ಯಕ್ರಮವನ್ನು ಎಂಎಲ್‍ಸಿ ಶಾಂತಾರಾಮ ಸಿದ್ದಿ ಸಸಿ ನೆಟ್ಟು ಆರಂಭಿಸಿದರು.
ಕುಂದರಗಿ ಶಾಲೆಯ ಅಭಿವೃದ್ಧಿಗೆ ಈಗಾಗಲೇ ಮೂರು ಲಕ್ಷದ ತಮ್ಮ ಅನುದಾನ ನೀಡಿರುವ ಬಗ್ಗೆ ತಿಳಿಸಿದರು. ಮತ್ತು ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.
ನಂತರ ಕುಂದರಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ ಡಾಕ್ಟರ್‍ಗಳಾಗಿ 14 ವರ್ಷಗಳ ನಿರಂತರ ಸೇವೆ ಸಲ್ಲಿಸಿ ವರ್ಗಾವಣೆಯಾಗುತ್ತಿರುವ ಚಂದ್ರಶೇಖರ ಬಿ ಅವರಿಗೆ ಸನ್ಮಾನ ಬಿಳ್ಕೋಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭಾ.ಜ.ಪ ಯಲ್ಲಾಪುರ ಮಂಡಲ ಅಧ್ಯಕ್ಷ ಜಿ.ಎನ್ ಗಾಂವ್ಕರ್, ಗ್ರಾ.ಪಂ ಉಪಾಧ್ಯಕ್ಷ ಡಾಕ್ಲು ಪಾಟೀಲ್, ಗ್ರಾ.ಪಂ ಸದಸ್ಯರು ಭಾಜಪಾ ಕಾರ್ಯದರ್ಶಿಗಳು ಆದ ಗಣೇಶ ಹೆಗಡೆ, ಗ್ರಾ.ಪಂ ಸದಸ್ಯ ರಾಮಕೃಷ್ಣ ಹೆಗಡೆ, ಎಸ್‍ಡಿಎಂಸಿ ಅಧ್ಯಕ್ಷ ಸತೀಶ ಹೆಗಡೆ ಕು.ಸೇ.ಸ.ಸಂಘದ ನಿರ್ದೇಶಕರಾದ ಕೃಷ್ಣ ಹುದಾರ, ಭಾ.ಜ.ಪ. ಯುವ ಮೋರ್ಚಾ ಉಪಾಧ್ಯಕ್ಷ ಸೋಮು ನಾಯ್ಕ, ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯಕಾರಣಿ ಸದಸ್ಯ ರಾಘು ಕುಂದರಗಿ ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಎಸ್ ಡಿ ಎಂ ಸಿ ಸದಸ್ಯರು ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.