• Slide
    Slide
    Slide
    previous arrow
    next arrow
  • ಅಕಾಲಿಕ ಮಳೆಗೆ ಬೆಳೆ ನಾಶ; ಮೇವಿಲ್ಲದೇ ಸೊರಗುತ್ತಿದೆ ದನ-ಕರುಗಳು

    300x250 AD


    ಅಂಕೋಲಾ: ಜುಲೈನಲ್ಲಿ ಸುರಿದ ಅಕಾಲಿಕ ಮಳೆಯಿಂದ ಗಂಗಾವಳಿ ಪ್ರವಾಹದಿಂದಾಗಿ ಬೆಳೆಗಳೆಲ್ಲ ನಾಶವಾಗಿದೆ. ಅದಲ್ಲದೇ ಚಂಡ ಮಾರುತದ ಪ್ರಭಾವದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲೂ ಇದೆ. ಇದರ ಪರಿಣಾಮ ಜಾನುವಾರುಗಳಿಗೆ ಜನೆವರಿ ತಿಂಗಳಲ್ಲಿಯೇ ಮೇವಿಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.


    ತಾಲೂಕಿನ ವಾಸರೆ, ಕೊಡ್ಸಣಿ, ಡೊಂಗ್ರಿ, ಕಲ್ಲೇಶ್ವರ, ಶಿರೂರು, ಬೆಳಸೆ, ಚಂದುಮಠ, ತೆಂಕನಾಡ ಬಾಗದಲ್ಲಿನ ಜಾನುವಾರುಗಳು ಮೇವಿಲ್ಲದೇ, ಬರಡಾಗುತ್ತಿವೆ. ರೈತರು ಸಾಗುವಳಿ ಮಾಡಿದಭತ್ತದ ಬೆಳೆ ನೆರೆಯಿಂದ ಮತ್ತುಭತ್ತಕಟಾವು ಮಾಡುವ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಯಿಂದ ಮೇವು(ಹುಲ್ಲು) ಸಂಪೂರ್ಣವಾಗಿ ನಾಶವಾಗಿದ್ದು ಜಾನುವಾರುಗಳ ಸಂರಕ್ಷಣೆಗೆ ಪ್ರತಿ ವರ್ಷದಂತೆಜುಲೈ 2022ರ ಕೊನೆಯವರೆಗೆಅವಶ್ಯವಿರುವ ಮೇವಿನ ಸಂಗ್ರಹಣೆಇಲ್ಲವಾಗಿದೆ. ಈ ಭಾಗಗಳಲ್ಲಿ ಜಾನುವಾರುಗಳಿಗೆ ಅವಶ್ಯವಿರುವ ಮೇವು ಒದಗಿಸಿಕೊಳ್ಳುವ ಯಾವುದೇ ಮೂಲ ಇರುವುದಿಲ್ಲ. ಮೇವಿನ ಕೊರತೆಯಿಂದ ಹಾಲಿನ ಇಳುವರಿಯೂ ಕಡಿಮೆಯಾಗಿದೆ.ಸಂಬಂಧಿಸಿದ ಅಧಿಕಾರಿಗಳು ನೆರೆ ಬಂದಿರುವ ಸಂದರ್ಭದಲ್ಲಿ ಬೆಳೆ ನಾಶ ಮತ್ತು ಜಾನುವಾರುಗಳ ಪರಶೀಲನೆ ನಡೆಸಿದ್ದಾರೆ. ಆದರೆ ಮೇವಿನ ಕುರಿತು ಇದುವರೆಗೂ ಯಾವುದೇ ಕ್ರಮಕೈಗೊಂಡಂತಿಲ್ಲ.


    ಈ ವರ್ಷದಆರಂಭದಲ್ಲಿಯೇ ಮೇವಿನ ಕೊರತೆಉಂಟಾದರೆಇನ್ನುಜುಲೈ ತಿಂಗಳವರೆಗೆ ಸಾಕಿರುವ ಜಾನುವಾರುಗಳಿಗೆ ಮೇವು ಎಲ್ಲಿಂದತರುವದುಎಂದುರೈತರುಕಂಗಾಲಾಗಿದ್ದಾರೆ. ಸರಕಾರಕೂಡಲೇ ದನಕರುಗಳ ರಕ್ಷಣೆಗೆ ಮುಂದಾಗಬೇಕು ಹಾಗೂ ಅವಶ್ಯವಿರುವ ಮೇವು ಪೂರೈಸುವ ವ್ಯವಸ್ಥೆಯನ್ನು ಪ್ರಾರಂಭಿಸಿ 2022ರ ಜುಲೈ ತಿಂಗಳ ಕೊನೆಯವರೆಗೆ ಮುಂದುವರೆಸಿಕೊಂಡು ಹೋಗಬೇಕೆಂದುರೈತರು ಆಗ್ರಹಿಸುತ್ತಿದ್ದಾರೆ.


    ನೆರಪೀಡಿತ ಭಾಗಗಳಲ್ಲಿ ಈ ಹಿಂದೆ ಮಾಡಿದ ವರದಿ ಆಧಾರದಲ್ಲಿರೈತರ ಕುಟುಂಬಗಳ ಮತ್ತು ಜಾನುವಾರುಗಳ ಪರಶೀಲನೆ ನಡೆಸಿ ಅಗತ್ಯಕ್ರಮ ಕೈಗೊಳ್ಳಬೇಕಾಗಿದೆ.

    ರೈತರ ನೆರವಿಗೆ ಸರ್ಕಾರ ಮುಂದಾಗಲಿ: ಗಂಗಾವಳಿ ನೆರೆ ಹಾವಳಿಯಿಂದ ಮತ್ತು ಅಕಾಲಿಕ ಮಳೆಯಿಂದ ತತ್ತರಿಸಿ ಹೋಗಿರುವತಾಲೂಕಿನ ಅನೇಕ ಗ್ರಾಮಗಳ ಜನರಿಗೆಇದುವರೆಗೂ ಸಮರ್ಪಕವಾದ ಪರಿಹಾರದೊರೆತಿಲ್ಲ. ಜೊತೆಗೆ ಜಾನುವಾರುಗಳು ಮೇವಿಲ್ಲದೆ ಬರಡಾಗುತ್ತಿದೆ. ಶೀಘ್ರದಲ್ಲಿಯೇ ಮೇವಿನ ವ್ಯವಸ್ಥೆ ಮಾಡಲು ಸರಕಾರ ಮುಂದೆ ಬರುವಂತೆಜಿಲ್ಲೆಗೆಆಗಮಿಸುತ್ತಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೆಚ್ಚಿನ ಮುತುವರ್ಜಿಯಿಂದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    300x250 AD


    ನಮ್ಮಗದ್ದೆಯಲ್ಲಿ ನೆರೆಯಿಂದ ನೀರುತುಂಬಿದ ಪರಿಣಾಮ ಬೆಳೆದಿರುವ ಭತ್ತ ಸಸಿ ಎಲ್ಲವೂ ನೀರಿನಲ್ಲಿ ಕೊಳೆತು ಹೋಗಿದೆ. ನಮ್ಮ ದನಗಳಿಗೆ ಬೇಕಾಗುವ ಹುಲ್ಲು ಸಿಗದಂತಾಗಿದೆ. ಅಧಿಕಾರಿಗಳು ಇಲ್ಲಿಗೆ ಬಂದಾಗ ವ್ಯವಸ್ಥೆ ಮಾಡುತ್ತೇವೆಎಂದು ಹೇಳಿದರು. ಮೇವಿಲ್ಲದೆ ದನಗಳು ಬಡಕಲಾಗುತ್ತಿವೆ. ದಿನಗೂಲಿ ಮಾಡಿಜೀವನ ನಡೆಸುವ ನಮಗೆ ಮೇವು ಖರೀದಿಸಲು ಸಾಧ್ಯವಾಗದು. – ಸುಕ್ರುಗೌಡ(ರೈತ, ಶಿರಗುಂಜಿ)


    ಈಗಾಗಲೇ ಸರಕಾದಿಂದ ನೆರೆ ಪರಿಹಾರವನ್ನು ನೀಡಲಾಗಿದೆ. ಜೊತೆಯಲ್ಲಿಯೇ ಮೇವನ್ನುಕೂಡ ಸಕಾಲದಲ್ಲಿಆಯಾ ಸ್ಥಳಗಳಿಗೆ ಕಲ್ಪಿಸಿ ಜಾನುವಾರುಗಳಿಗೂ ಮೇವಿನ ಕೊರತೆಆಗದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. – ರೂಪಾಲಿ ನಾಯ್ಕ(ಶಾಸಕಿ)


    ಭತ್ತದ ಸಸಿಗಳು ಬೆಳೆಯುವ ಸಂದರ್ಭದಲ್ಲಿ ನೆರೆ ಬಂದು ಹಾನಿ ಆಗಿದೆ. ಬಳಿಕ ಅಳಿದು ಉಳಿದ ಬತ್ತದ ಸಸಿಯನ್ನು ಬೆಳೆದರೆ ಬತ್ತಕಟಾವು ಮಾಡುವ ಸಮಯದಲ್ಲಿ ಮಳೆ ಸುರಿದುಎಲ್ಲವೂ ಕೊಳೆತು ಹೋಗಿದೆ. ದನಕ್ಕೆ ಬೇಕಾಗುವ ಒಣ ಹುಲ್ಲುಇಲ್ಲದೇ ದನಗಳು ಬರಡಾಗುತ್ತಿವೆ. – ಕಲಾವತಿಗೌಡ (ರೈತ ಮಹಿಳೆ, ಕೊಡ್ಸಣಿ)

    Share This
    300x250 AD
    300x250 AD
    300x250 AD
    Leaderboard Ad
    Back to top