ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶಿಕ್ಷಣ ಸೇವಾ ಸಮಿತಿ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ, ಷಷ್ಟಿ ಪೂರಣ ಮಹೋತ್ಸವ ಸಮಿತಿ ಇವರ ಸಂಯುಕ್ತ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿದ ಸಂಸ್ಥಾಪಕರ ಸ್ಮಾರಕ ಮಹಾದ್ವಾರದ ಶಿಲಾ ಫಲಕದ ಅನಾವರಣ ಹಾಗೂ ಅನ್ನಪೂರ್ಣ ಸಭಾಭವನದ ಹಸ್ತಾಂತರ(ನಾಗರಕಟ್ಟೆ ಸಹೋದರರಿಂದ) ಮತ್ತು ಉದ್ಘಾಟನೆ ಜ.3ರಂದು ಮಧ್ಯಾಹ್ನ 4ಕ್ಕೆ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆವಹಿಸುವರು. ಕೇಂದ್ರ ಸಂಸದಿಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಸಂಸದ ಅನಂತಕುಮಾರ ಹೆಗಡೆ, ಎಸ್.ವಿ.ಸಂಕನೂರು, ಶಾಂತಾರಮ ಸಿದ್ದಿ, ಗ್ರಾಪಂ ಅಧ್ಯಕ್ಷೆ ಸರೋಜಾ ರಾವ್, ಉಪಾಧ್ಯಕ್ಷ ರಾಘವೇಂದ್ರ ಆರ್.ರಾಯ್ಕರ್, ಸದಸ್ಯ ಅಬ್ದುಲ್ ಬಾರಿ ಹುಸೇನ್ ಸಾಬ್, ಆರ್‍ಎಸ್‍ಎಸ್‍ನ ಹಿರಿಯ ಪ್ರಚಾರಕ ಸು.ರಾಮಣ್ಣ, ಕೃಷ್ಣ ಹೆಗಡೆ, ವಿಶ್ವ ಹಿಂದೂ ಪರಷತ್‍ನ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಗೋಪಾಲಜಿ, ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ದಿವಾಕರ ಶೆಟ್ಟಿ ಉಪಸ್ಥಿತರಿರುತ್ತಾರೆ.