ಹೊನ್ನಾವರ: ತಾಲೂಕಿನ ಹಳದಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬೀದಿದೀಪಗಳು ಇಲ್ಲದಿರುವುದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಕೂಡಲೇ ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಥಳೀಯರು ಪಂಚಾಯತ್‍ಗೆ ಮನವಿ ಸಲ್ಲಿಸಿದರು.
ಬಡಗಣಿ ಸೇತುವೆಯಿಂದ ಸಾಲಿಕೆರಿಯವರೆಗೆ ಬೀದಿ ದೀಪಗಳು ಇಲ್ಲದೆಇರುವುದರಿಂದರಾತ್ರಿಯ ಸಮಯ ಪಾದಚಾರಿಗಳು ವಾಹನ ಸವಾರರಿಗೆಗೋಚರಿಸದೆ ಅಪಘಾತಗಳು ಹೆಚ್ಚಾಗುತ್ತಿದೆ. ಚತುಷ್ಪಥರಸ್ತೆಕಾಮಗಾರಿ ಪಡೆದಐಆರ್‍ಬಿ ಕಂಪನಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಜೊತೆ ಮಾಡಿದಕರಾರಿನ ಪ್ರಕಾರಇದರ ಸಂಪೂರ್ಣಜವಾಬ್ದಾರಿತೆಗೆದುಕೊಂಡು ಹಳದಿಪುರದ ಬಡಗಣಿಯಿಂದ ಸಾಲಿಕೇರಿಯವರೆಗೆ ದೀಪದ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡಿದಒಂದು ವಾರದಗಡುವಿನಲ್ಲಿ ದೀಪದ ವ್ಯವಸ್ಥೆಯ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೆ ಇದ್ದಲ್ಲಿ ಹಳದಿಪುರದ ಗ್ರಾಮ ಪಂಚಾಯತ್‍ನ ಎಲ್ಲಾ ಪ್ರಜ್ಞಾವಂತ ನಾಗರಿಕರು ಜನಪ್ರತಿನಿಧಿಗಳು, ಸಾರ್ವಜನಿಕರೊಂದಿಗೆ ಜೊತೆಗೂಡಿ ಐ.ಆರ್.ಬಿ ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಅಧ್ಯಕ್ಷ ಪಂ. ಅಧ್ಯಕ್ಷ ಅಜಿತ ಮುಕುಂದ ನಾಯ್ಕ ಬೆಂಬಲ ವ್ಯಕ್ತಪಡಿಸಿದರು.
ಸ್ಥಳೀಯರಾದ ಗಣಪತಿ ಭಟ್ ಮಾತನಾಡಿ, ಹಳದಿಪುರ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಹಾಗೂ ಬೀದಿ ದೀಪಗಳಿಲ್ಲದೇ ಅಪಘಾತಗಳು ಹೆಚ್ಚುತ್ತಲೇ ಇದೆ. ಬೀದಿ ದೀಪಗಳನ್ನು ಅಳವಡಿಸುವಂತೆ ಸಾರ್ವಜನಿಕರೇಲ್ಲರೂ ಸೇರಿ ಈಗಾಗಲೇ ಮನವಿ ನೀಡಿದ್ದೇವೆ ಎಂದರು.